ಮಂಗಳವಾರ, ಮಾರ್ಚ್ 19, 2024

ಚುನಾವಣಾ ಕರಪತ್ರ, ಪೋಸ್ಟರ್ ಮುದ್ರಣ ಮೇಲೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಆದೇಶ

ಬಳ್ಳಾರಿ,ಮಾ.19(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಚುನಾವಣಾ ಕರಪತ್ರಗಳು ಮತ್ತು ಪೆÇೀಸ್ಟರ್‍ಗಳ ಮುದ್ರಣ ಮತ್ತು ಪ್ರಕಟಣೆಯ ಮೇಲೆ ಅಪಪ್ರಚಾರ ಕುರಿತಂತೆ ಸುಳ್ಳು ಮಾಹಿತಿಯನ್ನು ಮುದ್ರಿಸದಂತೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ರಾಜಕೀಯ ಮತಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸುವಂತಹ, ದ್ವೇಷ ಭಾವನೆಗಳನ್ನು ಕೆರಳಿಸುವಂತಹ ಬ್ಯಾನರ್‍ಗಳಾಗಲೀ, ಹೋರ್ಡಿಂಗ್ಸ್‍ಗಳಾಗಲೀ ಮತ್ತು ಕರಪತ್ರಗಳನ್ನಾಗಲೀ ಮುದ್ರಿಸುವಂತಿಲ್ಲ. ಮುದ್ರಿಸಲಾದ ಅಥವಾ ಬಹು-ಗ್ರಾಫ್ ಮಾಡಲಾದ ಪ್ರತಿಯೊಂದು ಚುನಾವಣಾ ಕರಪತ್ರ, ಫಲಕ, ಭಿತ್ತಿಪತ್ರ ಅಥವಾ ಪೆÇೀಸ್ಟರ್ ಮುಂಭಾಗದಲ್ಲಿ ಮುದ್ರಕನ ಹೆಸರು ಮತ್ತು ವಿಳಾಸ ಮತ್ತು ಪ್ರಕಾಶಕರ ಹೆಸರು, ವಿಳಾಸವನ್ನು ಕಡ್ಡಾಯವಾಗಿ ಹೊಂದಿರಬೇಕು. ಅಂತಹ ಯಾವುದೇ ಡಾಕ್ಯುಮೆಂಟ್‍ನ ಮುದ್ರಣವು ಉದ್ದೇಶಿತ ಪ್ರಕಾಶಕರಿಂದ ಸಹಿ ಮಾಡಲ್ಪಟ್ಟ ಮತ್ತು ಅವನು ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಲ್ಪಟ್ಟ ಅವನ ಗುರುತಿನ ಘೋಷಣೆಯನ್ನು ದ್ವಿ ಪ್ರತಿಯಲ್ಲಿ (ನಕಲಿನಲ್ಲಿ) ಪಡೆಯಬೇಕು. ಮುದ್ರಣ ಘೋಷಣೆಯ ಒಂದು ಪ್ರತಿಯನ್ನು ಮತ್ತು ದಾಖಲೆಯ ಒಂದು ಪ್ರತಿಯನ್ನು ಮುದ್ರಿಸಿರುವ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 188 ಅಡಿ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಡಿಸಿ ಪ್ರಶಾಂತ್ ಕುಮಾರ್ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ