ಗುರುವಾರ, ಮಾರ್ಚ್ 21, 2024

ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ದಾಳಿ: ಮದ್ಯ ವಶ

ಬಳ್ಳಾರಿ,ಮಾ.21(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ, ಬುಧವಾರದಂದು ಅಬಕಾರಿ ಪೊಲೀಸ್ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ. ಕಂಪ್ಲಿ ಪಟ್ಟಣದ ಕಂಪ್ಲಿ-ಬಳ್ಳಾರಿ ರಸ್ತೆಯಲ್ಲಿ ರಸ್ತೆಗಾವಲು ಮಾಡುವ ಸಮಯದಲ್ಲಿ ಟಿವಿಎಸ್ ಎಕ್ಸ್‍ಎಲ್ ಸೂಪರ್ ಹೆವಿಡ್ಯೂಟಿ ಕಪ್ಪು ಮತ್ತು ಹಸಿರು ಬಣ್ಣದ ದ್ವಿಚಕ್ರ ವಾಹನದಲ್ಲಿ 17.280 ಲೀ. (ಅಂದಾಜು ಮೌಲ್ಯ ರೂ.27700) ಮದ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸಾವರನನ್ನು ವಶಕ್ಕೆ ಪಡೆದುಕೊಂಡು ಮದ್ಯ ಹಾಗೂ ವಾಹನವನ್ನು ಜಪ್ತು ಮಾಡಿ ಪ್ರಕರಣ ದಾಖಲಿದೆ. ಕುರುಗೋಡು ತಾಲ್ಲೂಕಿನ ಬಳ್ಳಾರಿ-ಸಿರುಗುಪ್ಪ ಮುಖ್ಯ ರಸ್ತೆಯ ಸೋಮಸಮುದ್ರ ಕ್ರಾಸ್‍ನಲ್ಲಿ ರಸ್ತೆಗಾವಲು ಸಮಯದಲ್ಲಿ ನೋಂದಣಿ ಸಂಖ್ಯೆ ಇಲ್ಲದ ಕಂದು ಬಣ್ಣದ ಟಿವಿಎಸ್ ಎಕ್ಸ್‍ಎಲ್ 100 ಹೆವಿಡ್ಯೂಟಿ ದ್ವಿಚಕ್ರ ವಾಹನದಲ್ಲಿ 38.160 ಲೀ ಮದ್ಯ ಹಾಗೂ 15.600 ಲೀ ಬಿಯರ್ (ಅಂದಾಜು ಮೌಲ್ಯ ರೂ.40940) ಅನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸಾವರನನ್ನು ವಶಕ್ಕೆ ಪಡೆದುಕೊಂಡು ಮದ್ಯ, ಬಿಯರ್ ಹಾಗೂ ವಾಹನವನ್ನು ಜಪ್ತುಪಡಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ