ಶನಿವಾರ, ಮಾರ್ಚ್ 16, 2024
ಮಗುವಿನ ಪೋಷಕರ ಪತ್ತೆಗೆ ಮನವಿ
ಬಳ್ಳಾರಿ,ಮಾ.16(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ಒಂದರ 07388 ಸಂಖ್ಯೆಯ ರೈಲಿನ ಭೊಗಿಯಲ್ಲಿ ಮಾ.01 ರಂದು 3 ವರ್ಷದ ಗಂಡು ಮಗು ದೊರೆತ್ತಿದ್ದು, ಪೋಷಕರ ಪತ್ತೆಗಾಗಿ ರೈಲ್ವೆ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.
ಮಗುವಿನ ಚಹರೆ: ದುಂಡು ಮುಖ, ಬಿಳಿ ಬಣ್ಣ ಹೊಂದಿದ್ದು, ರೈಲುಗಾಡಿ ಸಂಖ್ಯೆ 07338 ಗುಂತಕಲ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಾಡಿಯ ಹಿಂದಿನ ಜನರಲ್ ಬೋಗಿಯಲ್ಲಿ ಬಳ್ಳಾರಿ ರೈಲ್ವೆ ನಿಲ್ದಾಣದ ವೇದಿಕೆ ನಂ.01 ರಲ್ಲಿ ನಿಂತಾಗ ಮಗು ಸಿಕ್ಕಿರುತ್ತದೆ.
ಈ ಮೇಲ್ಕಂಡ ಮಾಹಿತಿ ಅನ್ವಯ ಮಗುವಿನ ಪೋಷಕರ ಸುಳಿವು ಸಿಕ್ಕಲ್ಲಿ, ಬಳ್ಳಾರಿ ರೈಲ್ವೆ ಪಿ.ಎಸ್ ದೂ:0839227606, ಮೊ:948080231, ಇ ಮೇಲ್ bellaryrly@ksp.gov.in ಗೆ ಅಥವಾ ಬೆಂಗಳೂರು ರೈಲ್ವ ಕಂಟ್ರೋಲ್ ರೂಂ ಇ ಮೇಲ್ dcrly@ksp.gov.in ಇವರಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ