ಗುರುವಾರ, ಮಾರ್ಚ್ 21, 2024

ಲೋಕಸಭೆ ಚುನಾವಣೆ: ಮಾದರಿ ನೀತಿ ಸಂಹಿತೆ ಉಲ್ಲಂಘನೆ 472.01 ಲೀ. ಮದ್ಯ, 26.33 ಕೆ.ಜಿ ಬೆಳ್ಳಿ, 3.55 ಲಕ್ಷ ನಗದು ವಶಕ್ಕೆ: ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ

ಬಳ್ಳಾರಿ,ಮಾ.21(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್‍ಗಳಲ್ಲಿ ಬಿಗಿಭದ್ರತೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರದಂದು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧೀಕೃತವಾಗಿ ಸಾಗಿಸುತ್ತಿದ್ದ 472.01 ಲೀಟರ್ (ಅಂದಾಜು ರೂ.1,85,378 ಮೌಲ್ಯ) ಮದ್ಯ, 26.33 ಕೆ.ಜಿ. ಬೆಳ್ಳಿ (ರೂ.7,37,240 ಬೆಲೆ) ಮತ್ತು ಸೂಕ್ತ ದಾಖಲೆಯಿಲ್ಲದ ರೂ.3,55,500 ನಗದು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ಅದೇರೀತಿಯಾಗಿ 12,000 ಕೆ.ಜಿ (ರೂ.4956500 ಮೌಲ್ಯದ) ಮೈಲ್ಡ್ ಸ್ಟೀಲ್ ಸ್ಕ್ರ್ಯಾಪ್ ಮತ್ತು 2 ವಾಹನಗಳನ್ನು (ರೂ.40 ಸಾವಿರ ಬೆಲೆಯ) ಜಪ್ತಿ ಮಾಡಲಾಗಿದೆ. ಅಬಕಾರಿ ಪೊಲೀಸ್ ವತಿಯಿಂದ 378.41 ಲೀಟರ್ (ರೂ.140698 ಮೌಲ್ಯ) ಮದ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ 93.60 ಲೀಟರ್ (ರೂ.44680 ಮೌಲ್ಯ) ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಒಟ್ಟು 32 ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಾದ್ಯಂತ ಚುನಾವಣೆಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈಗಾಗಲೇ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅವುಗಳು ಕಾರ್ಯಪ್ರವೃತ್ತವಾಗಿದೆ. 16 ಫ್ಲೈಯಿಂಗ್ ಸÁ್ಕ್ವ್ಯಡ್, 24 ಎಸ್‍ಎಸ್‍ಟಿ ತಂಡ ಮತ್ತು 7 ಅಬಕಾರಿ ತಂಡ ಕಾರ್ಯ ನಿರ್ವಹಿಸುತ್ತಿವೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ