ಮಂಗಳವಾರ, ಮಾರ್ಚ್ 19, 2024
ಸಾರ್ವಜನಿಕ ಆಸ್ತಿ, ತೆರೆದ ಸ್ಥಳಗಳನ್ನು ವಿರೂಪಗೊಳಿಸದಂತೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕಟ್ಟುನಿಟ್ಟಿನ ಆದೇಶ
ಬಳ್ಳಾರಿ,ಮಾ.19(ಕರ್ನಾಟಕ ವಾರ್ತೆ):
ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕ ಆಸ್ತಿಯನ್ನಾಗಲೀ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಕಾಣುವಂತೆ ಗೋಡೆ ಬರಹ, ಜಾಹೀರಾತು ಪೋಸ್ಟರ್ ಆಳವಡಿಕೆ ಸೇರಿದಂತೆ ಇನ್ನಿತರೆ ಫಲಕಗಳನ್ನು ಹಾಕುವ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ವಿರೂಪಗೊಳಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿದ್ದಾರೆ.
ಸಾರ್ವಜನಿಕ ಪ್ರದೇಶಗಳ ಮೇಲೆ ಅಧಿಕಾರ ಹೊಂದಿರುವ ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿಯಿಲ್ಲದೇ ಯಾವುದೇ ತರಹದ ಗೋಡೆ ಬರಹ, ಜಾಹೀರಾತು ಪೋಸ್ಟರ್ ಅಳವಡಿಸುವಂತಿಲ್ಲ ಮತ್ತು ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಅಂಟಿಸಬಾರದು ಮತ್ತು ಕೆತ್ತನೆ ಮಾಡುವಂತಿಲ್ಲ. ಇಂತಹÀ ಕೃತ್ಯಗಳಿಗೆ ಕುಮ್ಮಕ್ಕು ಅಥವಾ ಸಲಹೆ ನೀಡಿದರೆ ಅಂತಹವರನ್ನು ಆರು ತಿಂಗಳು ಕಾರಾಗೃಹ ಶಿಕ್ಷೆ ಸೇರಿದಂತೆ ದಂಡ ವಿಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಚುನಾವಣೆ ಪ್ರಚಾರದಿಂದ ಇಂತಹ ವಿರೂಪಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸ್ಥಳೀಯ ಪ್ರಾಧಿಕಾರದ ಪರವಾನಿಗೆ ಇಲ್ಲದೇ ಯಾವುದೇ ತರಹದ ಜಾಹೀರಾತುಗಳನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿರುವ ಯಾವುದೇ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ. ಸಾರ್ವಜನಿಕ, ಖಾಸಗಿ ಕಟ್ಟಡಗಳು ಮತ್ತು ಇತರ ತೆರೆದ ಸ್ಥಳಗಳ ಗೋಡೆಗಳ ಮೇಲೆ ಬರೆದು ಅಥವಾ ಭಿತ್ತಿಪತ್ರಗಳನ್ನು ಬರೆದು ವಿರೂಪಗೊಳಿಸುವುದನ್ನು ನಿಷೇಧಿಸಲಾಗಿದೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಆರು ತಿಂಗಳವರೆಗೆ ಹಾಗೂ ವಿಸ್ತರಿಸಬಹುದಾದಂತಹ ದಂಡನೆಗೆ ಗುರಿ ಪಡಿಸಲಾಗುತ್ತದೆ.
ಈ ಆದೇಶವು ಇಡೀ ಜಿಲ್ಲೆಗೆ ಅನ್ವಯಿಸಲಿದ್ದು, ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ