ಸೋಮವಾರ, ಮಾರ್ಚ್ 25, 2024

ಲೋಕಸಭೆ ಸಾರ್ವತ್ರಿಕ ಚುನಾವಣೆ | ಸೂಕ್ತ ದಾಖಲೆ ಇಲ್ಲದೇ ₹50 ಸಾವಿರ ಮೇಲ್ಪಟ್ಟು ಹೆಚ್ಚಿನ ಹಣ ಕೊಂಡೊಯ್ಯುವಂತಿಲ್ಲ

ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಸಂಬಂಧ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, 09-ಬಳ್ಳಾರಿ (ಪ.ಪಂ) ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ರೂ.50 ಸಾವಿರ ಮೇಲ್ಪಟ್ಟು ನಗದು ಹಣವನ್ನು ಸೂಕ್ತ ದಾಖಲೆಗಳಿಲ್ಲದೇ ತೆಗೆದುಕೊಂಡು ಹೋಗಲು ಮತ್ತು ಸಾಗಾಣಿಕೆ ಮಾಡಲು ಅವಕಾಶ ಇರುವುದಿಲ್ಲ. ದಾಖಲೆಗಳಿಲ್ಲದೇ ಸಾಗಾಣಿಕೆ ಮಾಡಿದ ನಗದು ಹಣವನ್ನು ಚುನಾವಣಾ ತಂಡಗಳು ಜಪ್ತಿ ಮಾಡಿ ಸಮಿತಿಗೆ ಹಾಜರುಪಡಿಸಿ ವರದಿ ಸಲ್ಲಿಸಲಾಗುತ್ತದೆ. ಚುನಾವಣಾ ತಂಡದಿಂದ ನಗದು ಹಣವನ್ನು ಜಪ್ತಿ ಮಾಡಿದಲ್ಲಿ, ಸಾರ್ವಜನಿಕರು ಹಣ ಬಿಡುಗಡೆಗಾಗಿ ಮೇಲ್ಮನವಿಯನ್ನು ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಕುಂದು ಕೊರತೆಗಳ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಲೋಕಸಭೆ ಸಾರ್ವತ್ರಿಕ ಚುನಾವಣೆಯ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದ್ದಾರೆ. *ಸಮಿತಿಯ ವಿವರ:* ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಬಳ್ಳಾರಿ. *ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:* ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಜಿಲ್ಲಾ ಕುಂದು ಕೊರತೆಗಳ ಸಮಿತಿಯ ಸಂಚಾಲಕರು ಹಾಗೂ ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಗಳಾದ ನಾಗರಾಜು ಮತ್ತು ಅವರ 8618724433 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ