ಮಂಗಳವಾರ, ಮಾರ್ಚ್ 19, 2024

ಚುನಾವಣೆ ಸಮಯದಲ್ಲಿ ಅಕ್ರಮ ವೆಚ್ಚದ ಮೇಲೆ ತೀವ್ರ ನಿಗಾ ಸಾರ್ವಜನಿಕರಿಗೆ ಆಸೆ, ಆಮಿಷ ಒಡ್ಡುವುದು ಮತ್ತು ಪ್ರಚೋದಿಸುವಂತಿಲ್ಲ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ

ಬಳ್ಳಾರಿ, ಮಾ.19(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ 2024ರ ಚುನಾವಣೆಯನ್ನು ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕರಿಸಬೇಕು ಹಾಗೂ ಹಣದ ದುರುಪಯೋಗ, ಸಾರ್ವಜನಿಕರಿಗೆ ಆಸೆ, ಆಮಿಷಗಳಿಗೆ ಒಳಪಡಿಸುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸೂಚನೆ ನೀಡಿದ್ದಾರೆ. ಚುನಾವಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಗೆ ಲಂಚ ನೀಡಬಾರದು ಅಥವಾ ಹಣವನ್ನು ಬಳಸಿ ಲಂಚ ನೀಡಲು ಪ್ರಯತ್ನಿಸಬಾರದು. ಚುನಾವಣೆಯ ಮೇಲೆ ಪ್ರಭಾವ ಬೀರುವ ಸಲುವಾಗಿ ಸರಕುಗಳು, ಬೆಲೆಬಾಳುವ ವಸ್ತುಗಳು, ಉಡುಗೊರೆಗÀಳು, ಮದ್ಯ, ಇಂಧನ ಇತ್ಯಾದಿ ಬೆಲೆಬಾಳುವ ವಸ್ತುಗಳನ್ನು ಸಾಗಾಣೆ ಅಥವಾ ಶೇಖರಣೆ ಮಾಡುವಂತಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಸರ್ವೇಲೆನ್ಸ್ ತಂಡಗಳು, ಚೆಕ್ ಪೆÇೀಸ್ಟ್ ಹಾಗೂ ವಿಡಿಯೊ ಕಣ್ಗಾವಲು ತಂಡಗಳು, ಫ್ಲೈಯಿಂಗ್ ಸ್ಕ್ವ್ಯಾಡ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ವಿವರಣಾತ್ಮಕ ಮತ್ತು ದೃಢೀಕರಿಸುವ ದಾಖಲೆಗಳಿಲ್ಲದೇ ರೂ.50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ. ಚುನಾವಣೆಯ ನಿಯಮಾವಳಿ ಉಲ್ಲಂಘಿಸಿದಲ್ಲಿ ಐಪಿಸಿ ಸೆಕ್ಷನ್ 188 ಅಡಿಯಲ್ಲಿ ಅಪರಾಧವೆಂದು ಪರಿಗಣಿಸಿ, ಕಾನೂನು ಕ್ರಮ ಜರುಗಿಸಲಾಗಿಸುತ್ತದೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ