ಬುಧವಾರ, ಮಾರ್ಚ್ 27, 2024

ಕ್ಷಯರೋಗ ಮುಕ್ತರಾಗಲು ಕಳಂಕ, ಭಯ ಬೇಡ; ನಿಗಧಿತ ಅವಧಿಯೊಳಗೆ ಚಿಕಿತ್ಸೆ ಪಡೆಯಿರಿ: ಡಿಹೆಚ್‍ಓ ಡಾ.ವೈ.ರಮೇಶಬಾಬು

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಮೈಕೊ ಬ್ಯಾಕ್ಟಿರಿಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಹರಡುವ ಕ್ಷಯರೋಗವನ್ನು ಆರು ತಿಂಗಳುಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಲು ಕಳಂಕ ಮತ್ತು ಭಯ ಬೇಡ. ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಿ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ನಗರದ ಬಂಡಿಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರದಂದು ಕ್ಷಯರೋಗದ ಚಿಕಿತ್ಸೆಯನ್ನು ಸರಿಯಾಗಿ ಪಡೆದು ಗುಣಮುಖರಾದವರಿಗೆ ಹಾಗೂ ನಿಗದಿಯಂತೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಬೆಂಬಲವಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಡಿಹಟ್ಟಿಯಲ್ಲಿ 43 ಜನರಿಗೆ ಜೆಎಸ್‍ಡಬ್ಲ್ಯೂ ಫೌಂಡೇಶನ್ ಮೂಲಕ ಪೌಷ್ಟಿಕ ಆಹಾರ ಕಿಟ್‍ಗಳನ್ನು ಒದಗಿಸಿದ್ದು, ಕ್ಷಯರೋಗ ಬಾಧಿತರು ಪ್ರತಿದಿನ ಪೌಷ್ಟಿಕ ಆಹಾರದೊಂದಿಗೆ ಮಾತ್ರೆಗಳನ್ನು ಸಹ ತಪ್ಪದೇ ಸೇವಿಸಬೇಕು. ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ತಪ್ಪದೇ ಪರೀಕ್ಷೆ ಮಾಡಿಸುವ ಮೂಲಕ ಬಳ್ಳಾರಿಯನ್ನು ಕ್ಷಯ ಮುಕ್ತ ಮಾಡುವುದಕ್ಕೆ ಬೆಂಬಲ ನೀಡಿರಿ ಎಂದು ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ ಅವರು ಮಾತನಾಡಿ, ‘ಹೌದು! ನಾವು ಕ್ಷಯವನ್ನು ಕೊನೆಗೊಳಿಸಬಹುದು’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಜಾಗೃತಿ ನೀಡಲಾಗುತ್ತಿದ್ದು, ಯಾರೂ ಹಿಂಜರಿಕೆ ತೋರದೇ, ರೋಗವನ್ನು ತ್ವರಿತವಾಗಿ ಪತ್ತೆಹಚ್ಚಲು ಸಹಕರಿಸಬೇಕು ಎಂದರು. ಈಗಾಗಲೇ ರೋಗ ಪತ್ತೆಹಚ್ಚಲು ನಗರದ ವಿಮ್ಸ್, ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಬಿನ್ಯಾಟ್ ಯಂತ್ರ ಹಾಗೂ ಟ್ರುನ್ಯಾಟ್ ಮಿಷನ್‍ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುμÁ್ಠನ ಮಾಡಲಾಗಿದ್ದು, ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು. ಸನ್ಮಾನ: ಕ್ಷಯರೋಗದ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ, ಚಿಕಿತ್ಸೆ ಪಡೆಯುವವರಿಗೆ ಮತ್ತು ಕ್ಷೇತ್ರ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿ, ಔಷಧಿ ಅಧಿಕಾರಿ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಯಾಸ್ಮೀನ್, ಡಾ.ನಿಜಾಮುದ್ದಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ಆರೋಗ್ಯ ನೀರಿಕ್ಷಣಾಧಿಕಾರಿ ಪಂಪಾಪತಿ, ಔಷಧಿ ಅಧಿಕಾರಿ ಖರಿಮುನ್ನೀಸಾ ಬೇಗಂ, ಜಿಲ್ಲಾ ಮೆದುಳು ಆರೋಗ್ಯದ ಸಲಹೆಗಾರ ಸಣ್ಣ ಕೇಶವ, ಎಸ್‍ಟಿಎಸ್ ಓಬಳರೆಡ್ಡಿ, ಎಸ್‍ಟಿಎಲ್‍ಎಸ್ ಬಸವರಾಜ್ ರಾಜಗುರು, ಟಿಬಿಹೆಚ್‍ವಿ ಪ್ರದೀಪ್, ಜೆಎಸ್‍ಡಬ್ಲ್ಯು ಫೌಂಡೆಶನ್ ಯುಎಇಎಸ್ ರಾಜೇಶ್ ಭಾರತೀಯ, ಡಾ.ಕಾಶಿಪ್ರಸಾದ್, ಪರಿಮಳ ಹಾಗೂ ಪಾರ್ವತಿ, ಮಹಾಲಿಂಗ ಸೇರಿದಂತೆ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಯವರು, ಸಾರ್ವಜನಿಕರು ಉಪಸ್ಥಿತರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ