ಶುಕ್ರವಾರ, ಮಾರ್ಚ್ 15, 2024
ಐಸಿಎಆರ್: ಮೂರು ದಿನಗಳ “ಪ್ರಸರಣ ಮತ್ತು ನರ್ಸರಿ ನಿರ್ವಹಣೆ” ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ
ಬಳ್ಳಾರಿ,ಮಾ.15(ಕರ್ನಾಟಕ ವಾರ್ತೆ):
ಇಲ್ಲಿಯ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಸ್ಥೆಯ ಸಂಶೋಧನಾ ಕೇಂದ್ರ ವತಿಯಿಂದ ಬೆಳಗಲ್ ತಾಂಡಾದ ಎಸ್‍ಸಿಎಸ್‍ಪಿ ರೈತರಿಗೆ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‍ಸಿಎಸ್‍ಪಿ) ಅಡಿಯಲ್ಲಿ ಪ್ರಸರಣ ಮತ್ತು ನರ್ಸರಿ ನಿರ್ವಹಣೆ ಕುರಿತು ಮೂರು ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಸ್ಥೆಯ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಬಿ.ಕೃಷ್ಣ ರಾವ್ ಅವರು ನರ್ಸರಿ ಮತ್ತು ನರ್ಸರಿಯ ಉದ್ಯಮಗಳ ಪ್ರಾಮುಖ್ಯತೆಯನ್ನು ರೈತರಿಗೆ ತಿಳಿಸಿದರು.
ನರ್ಸರಿ ಉದ್ಯಮಿಗಳು ಮತ್ತು ಅವರ ಯಶಸ್ಸಿನ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಮತ್ತು ಸಲಹೆಗಾರರಾದ ಸುರೇಂದ್ರ ಕುಮಾರ್ ಅವರು, ಸರ್ಕಾರದ ಯೋಜನೆಗಳಲ್ಲಿ ಲಭ್ಯವಿರುವ ಯೋಜನೆಗಳು, ಸಹಾಯಧನ ಮತ್ತು ಸಹಾಯದ ಕುರಿತು ರೈತರಿಗೆ ತಿಳಿಸಿದರು.
ಮೊದಲ ದಿನದಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಮೂಲ ಸಸ್ಯ ಪ್ರಸರಣ ಮತ್ತು ಅದರ ಪ್ರಕಾರಗಳ ಬಗ್ಗೆ ತಿಳಿಸಲಾಯಿತು. ನರ್ಸರಿ ಅಭ್ಯಾಸಗಳಲ್ಲಿ ಅಳವಡಿಸಿಕೊಂಡ ಪರಿಕರಗಳು ಮತ್ತು ತಂತ್ರಗಳು ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಸ್ಯಕಸಿ ಪ್ರಾಮುಖ್ಯತೆ ವಿವರಿಸಲಾಯಿತು. ನೆರಳೆ ಮರದಲ್ಲಿ ಮೊಳಕೆ-ಕಸಿ ಮಾಡುವುದನ್ನು ಪ್ರದರ್ಶಿಸಲಾಯಿತು.
ಎರಡನೇಯ ದಿನದಂದು ಪ್ರಶಿಕ್ಷಣಾರ್ಥಿಗಳು, ಸಂಡೂರಿನ ಧರ್ಮಪುರ ತೋಟಗಾರಿಕಾ ಕ್ಷೇತ್ರಕ್ಕೆ ಭೇಟಿ ನೀಡಿ ಮಾವು, ಹಲಸು ಮತ್ತು ತೆಂಗಿನಕಾಯಿ ಪ್ರಸರಣ, ನಿರ್ವಹಣೆ ಮತ್ತು ಗುಣಮಟ್ಟದ ಬೀಜ ಸಾಮಗ್ರಿ ಮತ್ತು ತಾಯಿ ಸಸ್ಯ ಆಯ್ಕೆಯ ಬಗ್ಗೆ ತರಬೇತಿ ನೀಡಲಾಯಿತು.
ಬಳಿಕ ಮುನಿರಾಬಾದ್ ನಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಕ್ಕೆ ಭೇಟಿ ನೀಡಿ, ಪ್ರಶಿಕ್ಷಣಾರ್ಥಿಗಳು ನರ್ಸರಿಯ ಮೂಲಸೌಕರ್ಯ ಮತ್ತು ಔಷಧೀಯ ಸಸ್ಯಗಳ ಪ್ರಸರಣ ವಿಧಾನಗಳ ಬಗ್ಗೆ ವಿವರಿಸಲಾಯಿತು.
ಅಲ್ಲಿನ ಗೋಡಂಬಿ ತೋಟಗಳಿಗೆ ಭೇಟಿ ನೀಡಿ ತಮ್ಮ ಗ್ರಾಮದಲ್ಲಿ ಗೋಡಂಬಿ ಬೆಳೆ ಕೃಷಿ, ತಳಿಗಳು ಮತ್ತು ಸಾಧ್ಯತೆಗಳ ಬಗ್ಗೆ ತಿಳಿದುಕೊಂಡರು. ಕಾಲೇಜು ಕ್ಯಾಂಪಸ್‍ನಲ್ಲಿರುವ ಔಷಧೀಯ ಮತ್ತು ಸುಗಂಧ ಸಸ್ಯಗಳ ಉದ್ಯಾನ ಮತ್ತು ಪ್ರಸರಣ ಪಾಲಿಹೌಸ್‍ಗಳಿಗೆ ಭೇಟಿ ನೀಡಿದರು.
ಮೂರನೇಯ ದಿನದಂದು ಬಳ್ಳಾರಿಯ ತೋಟಗಾರಿಕೆ ಇಲಾಖೆಯ ನರ್ಸರಿಗೆ ಭೇಟಿ ನೀಡಿ, ಅಲಂಕಾರಿಕ ಸಸ್ಯ ಮತ್ತು ಹಣ್ಣಿನ ಗಿಡಗಳಲ್ಲಿ ಅಳವಡಿಸಿಕೊಂಡಿರುವ ಪ್ರಸರಣ ತಂತ್ರಗಳ ಬಗ್ಗೆ ತಿಳಿದುಕೊಂಡರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಯೋಗೇಶ್ವರ್ ಅವರು ಅಲಂಕಾರಿಕ ಗಿಡಗಳು ಮತ್ತು ಅವುಗಳ ಮಹತ್ವದ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯತ್‍ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯಾ ಯರಗಲ್ ಅವರು ಇಲಾಖಾ ಯೋಜನೆಗಳು ಮತ್ತು ಸಹಾಯಧನಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಬೆಳಗಲ್ ತಾಂಡಾ ಗ್ರಾಮದ ಒಟ್ಟು 25 ರೈತರು ಭಾಗವಹಿಸಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)






ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ