ಮಂಗಳವಾರ, ಮಾರ್ಚ್ 19, 2024

ವೀರಾಂಜನೇಯ.ಕೆ ಅವರಿಗೆ ಪಿಎಚ್‍ಡಿ ಪದವಿ

ಬಳ್ಳಾರಿ,ಮಾ.19(ಕರ್ನಾಟಕ ವಾರ್ತೆ): ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ವೀರಾಂಜನೇಯ.ಕೆ ಅವರಿಗೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ಘೋಷಿಸಿದೆ. ವೀರಾಂಜನೇಯ.ಕೆ ಇವರು ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ.ತಿಪ್ಪೇಸ್ವಾಮಿ ಅವರ ಮಾರ್ಗದರ್ಶನದಲ್ಲಿ “ಹಿಸ್ಟಾರಿಕಲ್ ಪ್ರಾಸ್ಪೆಕ್ಟಿವ್ ಆಫ್ ಜ್ಯುವೆಲರಿ ಸಿಸ್ಟಮ್ ಇನ್ ಕರ್ನಾಟಕ” (ಎ ಸ್ಪೆಷಲ್ ರೆಫರೆನ್ಸ್ ಟು ಬಳ್ಳಾರಿ ಅಂಡ್ ಕೊಪ್ಪಳ ರೀಜನ್ಸ್) ಎಂಬ ಶೀರ್ಷಿಕೆಯಡಿಯಲ್ಲಿ ಸಂಶೋಧನೆ ಕೈಗೊಂಡು ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಘೋಷಿಸಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ