ಶುಕ್ರವಾರ, ಮಾರ್ಚ್ 22, 2024

ಅಕ್ರಮ ಮದ್ಯ ಸಾಗಾಟ: 4 ಪ್ರಕರಣ ದಾಖಲು

ಬಳ್ಳಾರಿ,ಮಾ.22(ಕರ್ನಾಟಕ ವಾರ್ತೆ): ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಿರುವುದರಿಂದ ಅಬಕಾರಿ ಪೊಲೀಸ್ ಅಧಿಕಾರಿಗಳಿಂದ ಗುರುವಾರ ವಿವಿಧೆಡೆ ದಾಳಿ ನಡೆಸಿ ಅಪಾರ ಮೌಲ್ಯದ ಮದ್ಯ ವಶಪಡಿಸಿಕೊಂಡು 04 ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಎನ್.ಮಂಜುನಾಥ ಅವರು ತಿಳಿಸಿದ್ದಾರೆ. ಬಳ್ಳಾರಿ ತಾಲ್ಲೂಕಿನ ಚಾನಾಳ್ ಗ್ರಾಮದ ಚಾನಾಳ್ ಕ್ರಾಸ್‍ನಲ್ಲಿ ರಸ್ತೆಗಾವಲು ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ 21.600 ಲೀ ಮದ್ಯ ಮತ್ತು 7.920 ಲೀ. ಬಿಯರ್ (ಅಂದಾಜು ಮೌಲ್ಯ ರೂ.89650) ಅನ್ನು ಸಾಗಾಣೆ ಮಾಡುತ್ತಿರುವುದನ್ನು ಜಪ್ತಿ ಮಾಡಿ, ವಾಹನ ಸಾವರನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಹಲಕುಂದಿ ಚೆಕ್‍ಪೆÇೀಸ್ಟ್‍ನಲ್ಲಿ ರಾಂಪುರ ಕಡೆಯಿಂದ ಬರುವ ಬಸ್ಸಿನಲ್ಲಿ ವ್ಯಕ್ತಿಯೋರ್ವನು 01 ಲೀಟರ್ ಸಾಮಥ್ರ್ಯದ 12 ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸೇಂದಿ 12.000 ಲೀಟರ್ (ಅಂದಾಜು ಮೌಲ್ಯ ರೂ.600) ಅನಧೀಕೃತವಾಗಿ ಸಾಗಾಟ ಮಾಡುತ್ತಿರುವುದನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಲಾಗಿದೆ. ಬಳ್ಳಾರಿ ನಗರದ ರೂಪನಗುಡಿ ರಸ್ತೆಯಲ್ಲಿ ಅಬಕಾರಿ ಪೊಲೀಸ್ ಅಧಿಕಾರಿಗಳು ಗಸ್ತು ಸಮಯದಲ್ಲಿ ಕಪ್ಪು ಬಣ್ಣದ ತ್ರಿಚಕ್ರ ವಾಹನದಲ್ಲಿ 25.920 ಲೀ. ಜಪ್ತು ವಸ್ತುಗಳ (ಅಂದಾಜು ಮೌಲ್ಯ ರೂ. 36520) ಮದ್ಯವನ್ನು ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ, ವಾಹನ ಸಾವರನ್ನು ವಶಕ್ಕೆ ಪಡೆದುಕೊಂಡು ಮದ್ಯ ಮತ್ತು ಆಟೋವನ್ನು ಜಪ್ತುಮಾಡಿ ಪ್ರಕರಣ ದಾಖಲಿಸಲಾಗಿದೆ. ಬಳ್ಳಾರಿ ತಾಲ್ಲೂಕಿನ ಬೊಮ್ಮನಹಾಳ್ ಚೆಕ್‍ಪೆÇೀಸ್ಟ್‍ನಲ್ಲಿ ವಾಹನ ತಪಾಸಣೆ ಸಮಯದಲ್ಲಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ 17.280 ಲೀ (ರೂ.7680 ಮೌಲ್ಯದ) ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ