ಮಂಗಳವಾರ, ಮಾರ್ಚ್ 26, 2024
ವಿಎಸ್‍ಕೆವಿವಿ: ಮಾ.27 ರಂದು ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ
ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ):
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರದರ್ಶನ ಕಲೆ ನಾಟಕ ವಿಭಾಗ ಕನ್ನಡ ಮತ್ತು ಇಂಗ್ಲಿμï ಅಧ್ಯಯನ ವಿಭಾಗ ಸಹಯೋಗದಲ್ಲಿ ವಿಶ್ವರಂಗಭೂಮಿ ದಿನಾಚರಣೆ-2024ರ ಅಂಗವಾಗಿ “ರಂಗಭೂಮಿಯ ಕಾಲಾತೀತ ಅಸ್ತಿತ್ವ” ವಿಷಯದ ಕುರಿತು ಶೀಸ್ತಿಯ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಾ.27 ಬುಧವಾರ ಬೆಳಿಗ್ಗೆ 11 ಗಂಟೆಗೆ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ನಾಗೇಶ ವಿ ಬೆಟ್ಟಕೋಟೆ ಅವರು ಉದ್ಘಾಟಿಸುವರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ.ಕೆ.ಎಂ.ಮೇತ್ರಿ ಅವರು ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಎನ್.ರುದ್ರೇಶ್, ಮೌಲ್ಯಮಾಪನ ಕುಲಸಚಿವರಾದ ಪೆÇ್ರ.ರಮೇಶ್ ಓ ಓಲೇಕರ್, ವಿತ್ತಾಧಿಕಾರಿಗಳಾದ ನಾಗರಾಜ, ಮಹಾರಾಷ್ಟ್ರದ ಎಸ್.ಪಿ.ಪಿ ಮಹಾವಿದ್ಯಾಲಯ, ಸಿರ್ಸಲ, ಪಾರ್ಲಿ ವೈಜನಾಥ್, ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧನಾ ಮಾರ್ಗದರ್ಶಿಗಳಾದ ಡಾ.ಚಂದ್ರಶೇಖರ್ ಕನಸೆ ಅವರು ಭಾಗವಹಿಸುವರು.
ಬೆಂಗಳೂರಿನ ರಂಗ ವಿಮರ್ಶಕರು ಹಾಗೂ ಚಿಂತಕರಾದ ಡಾ.ಎ.ಆರ್.ಗೋವಿಂದಸ್ವಾಮಿ ಅವರು ಸಮಾರೋಪ ನುಡಿಯನ್ನು ಹಂಚಿಕೊಳ್ಳುವರು.
ವಿವಿಯ ಕುಲಸಚಿವರಾದ ಎನ್.ರುದ್ರೇಶ್ ಅವರು ಅಧ್ಯಕ್ಷತೆ ವಹಿಸುವರು.
ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪೆÇ್ರ ರಾಬರ್ಟ್ ಜೋಸ್ ಸೇರಿದಂತೆ ವಿಶ್ವವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ವಿವಿ ಪ್ರಕಟಣೆ ತಿಳಿಸಿದೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ