ಬುಧವಾರ, ಅಕ್ಟೋಬರ್ 9, 2024
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಅ.09(ಕರ್ನಾಟಕ ವಾರ್ತೆ):
ಹೊಸಪೇಟೆ ರೈಲು ನಿಲ್ದಾಣದ ವೇದಿಕೆ ನಂ.02 ರಲ್ಲಿ ಬಿಜಾಪುರ-ಯಶವಂತಪುರ ಎಕ್ಸ್ಪ್ರೆಸ್ ರೈಲು ಗಾಡಿಯ ಶೌಚಾಲಯದಲ್ಲಿ ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದ ಸುಮಾರು 40-45 ವರ್ಷದ ಅನಾಮದೇಯ ವ್ಯಕ್ತಿಯ ಮೃತ ದೇಹ ಅ.08ರಂದು ದೊರೆತ್ತಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಮನವಿ ಮಾಡಿದ್ದಾರೆ.
*ಮೃತನ ಚಹರೆ:*
ಎತ್ತರ ಸುಮಾರು 5.5 ಅಡಿ, ಚೌಕ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಉದ್ದ ಮೂಗು, ತಲೆಯಲ್ಲಿ ಅರ್ಧ ಇಂಚು ಕಪ್ಪು ಕೂದಲು ಇದ್ದು, ಸಣ್ಣ ಮೀಸೆ ಮತ್ತು ಗಡ್ಡ ಬಿಟ್ಟಿರುತ್ತಾನೆ.
ಮೃತನ ಮೈಮೇಲೆ ಡಾರ್ಕ್ ಗ್ರೀನ್ ಬಣ್ಣದ ಆಫ್ ಟೀ ಶರ್ಟ್, ಒಂದು ನೀಲಿ ಬಣ್ಣದ ಆಫ್ ಚಡ್ಡಿ, ಕಪ್ಪು ಬಣ್ಣದ ನೈಟ್ ಪ್ಯಾಂಟ್ ಇರುತ್ತದೆ.
ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ದೂ:08392-276063, ಇಮೇಲ್ bellaryrly@ksp.gov.in ಅಥವಾ ರೈಲ್ವೇ ಪೊಲೀಸ್ ಕಂಟ್ರೋಲ್ ರೂಂ ದೂ:080-22871291, ಇಮೇಲ್ dcrly@ksp.gov.in ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ