ಗುರುವಾರ, ಅಕ್ಟೋಬರ್ 10, 2024
ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಅ.10(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ನಾಡಂಗ ಗ್ರಾಮದ ಗರ್ಜಿಹಳ್ಳದ ನೀರಿನ ದಡದಲ್ಲಿ ಸುಮಾರು 20-25 ವರ್ಷದ ಅನಾಮಧೇಯ ವ್ಯಕ್ತಿಯ ಮೃತ ಶವ ಅ.08 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಸಿರುಗುಪ್ಪ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ.
ಚಹರೆ: ಎತ್ತರ 5.5 ಅಡಿ, ದುಂಡುಮುಖ, ಸಾಧರಣ ಮೈಕಟ್ಟು, ಕಪ್ಪನೇ ಮೈಬಣ್ಣ ಹೊಂದಿದ್ದು, ತುಂಬುತೋಳಿನ ತಿಳಿನೀಲಿ ಬಣ್ಣದ ಅಂಗಿ ಮತ್ತು ನಸೀ ಬಣ್ಣದ ಅರ್ಧ ಇರುವ ಪ್ಯಾಂಟ್ ಧರಿಸಿರುತ್ತಾನೆ.
ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ದೂ.08396-220333, ಸಿಪಿಐ ದೂ.08396-2200093, ಬಳ್ಳಾರಿ ಗ್ರಾಮೀಣ ಉಪವಿಭಾಗ ಡಿಎಸ್‌ಪಿ ದೂ.08392-276000 ಹಾಗೂ ಬಳ್ಳಾರಿ ಎಸ್‌ಪಿ ಅವರ ದೂ.08392-258400 ಗೆ ಸಂಪರ್ಕಿಸಬಹುದು.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ