ಸೋಮವಾರ, ನವೆಂಬರ್ 4, 2024
ಅನಾಮಧೇಯ ಮೃತ ದೇಹ ಪತ್ತೆ; ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ನ.04(ಕರ್ನಾಟಕ ವಾರ್ತೆ):
ಬಳ್ಳಾರಿಯ ಸತ್ಯಂ ಕಾಲೇಜು ಬಳಿಯ ಹೆಚ್‌ಎಲ್‌ಸಿ ಉಪಕಾಲುವೆಯ (ಭತ್ರಿ ಮುಖ್ಯ ಕಾಲುವೆ) ಮೋರಿ ಹತ್ತಿರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಂದಾಜು 40-45 ವರ್ಷದ ಅನಾಮಧೇಯ ವ್ಯಕ್ತಿಯ ಮೃತದೇಹ ನ.03ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಮನವಿ ಮಾಡಿದ್ದಾರೆ.
*ಮೃತನ ಚಹರೆ:*
ಎತ್ತರ ಅಂದಾಜು 5 ಅಡಿ 4 ಇಂಚು, ಕಪ್ಪು ಮೈಬಣ್ಣ, ಕೋಲು ಮುಖ ಇದ್ದು, ತಲೆಯಲ್ಲಿ ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು ಇರುತ್ತದೆ. ಬಿಳಿ ಮತ್ತು ಕಪ್ಪು ಬಣ್ಣ ಮಿಶ್ರಿತ ಮೀಸೆ, ಬಿಳಿ ಗಡ್ಡ ಇದ್ದು, ಸೊಂಟಕ್ಕೆ ಕೆಂಪು ಉಡುದಾರ ಇರುತ್ತದೆ. ಮೃತನ ಮೈಮೇಲೆ ಬಿಳಿ ಬಣ್ಣದ ಕಟ್ ಬನಿಯಾನ್ ಇದ್ದು, ಗಿಳಿ ಹಸಿರು ಬಣ್ಣದ ಪ್ರಿಮಿಯರ್ ಸುಭೀರ ಎಂಬ ಹೆಸರಿನ ಅಂಡರ್‌ವೇರ್ ಇರುತ್ತದೆ.
ಮೇಲ್ಕಂಡ ಚಹರೆ ಗುರುತುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ:08392-276461, ಪಿಐ ಮೊ: 9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ