ಸೋಮವಾರ, ನವೆಂಬರ್ 4, 2024
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ನ.04(ಕರ್ನಾಟಕ ವಾರ್ತೆ):
ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಗಡಿಗಿ ಚೆನ್ನಪ್ಪ ವೃತ್ತದ ರಸ್ತೆಯ ಮಾರ್ಗದಲ್ಲಿ ನ.02 ರಂದು ಅಪರಿಚಿತ ವಾಹನವೊಂದು ರಸ್ತೆಯ ಪಕ್ಕದಲ್ಲಿ ಮಲಗಿದ್ದ ಅನಾಮಧೇಯ ವ್ಯಕ್ತಿಯ ಮೇಲೆ ವಾಹನ ಹಾಯಿಸಿಕೊಂಡು ಹೋಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.
ಮೃತನ ಚಹರೆ ಗುರುತು: ಎತ್ತರ 5.3 ಅಡಿ, ಉದ್ದನೇಯ ಮುಖ, ತೆಳ್ಳನೇಯ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕೆಂಪು ಬಣ್ಣದ ಟಿ-ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಸಿಮೆಂಟ್ ಬಣ್ಣದ ಬನಿಯನ್ ಧರಿಸಿರುತ್ತಾನೆ.
ತಲೆಯಲ್ಲಿ ಬಿಳಿ ಕೂದಲು, ಬಿಳಿ ಬಣ್ಣದ ಉದ್ದನೇಯ ಗಡ್ಡ, ಎರಡು ಕಣ್ಣಿನ ಹುಬ್ಬಿನ ಮೇಲೆ ಕಪ್ಪು ಬಣ್ಣ, ಸುಕ್ಕು ಕಟ್ಟಿದ ಚರ್ಮ ಹೊಂದಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯ ದೂ.08392-275722, ಪಿಐ ಮೊ.9480803048, ಬಳ್ಳಾರಿ ನಗರ ಡಿವೈಎಸ್ಪಿ ದೂ.08392-272322 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ