ಗುರುವಾರ, ನವೆಂಬರ್ 14, 2024

ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಸುಸೂತ್ರ, ಶಾಂತಿಯುತ ಮತದಾನ

ಶೇ.76.24 ರಷ್ಟು ಮತದಾನ ಬಳ್ಳಾರಿ,ನ.14(ಕರ್ನಾಟಕ ವಾರ್ತೆ): ಸಂಡೂರು ವಿಧಾನಸಭೆ ಉಪಚುನಾವಣೆಗೆ ಸಂಬAಧಿಸಿದAತೆ, ಸಂಡೂರು ಕ್ಷೇತ್ರ ವ್ಯಾಪ್ತಿಯ 253 ಮತಗಟ್ಟೆಗಳಲ್ಲಿ ನ.13 ರಂದು ಬುಧವಾರದಂದು ಸುಸೂತ್ರ ಹಾಗೂ ಶಾಂತಿಯುತ ಮತದಾನ ನಡೆದಿದ್ದು, ಒಟ್ಟು ಶೇ.76.24 ರಷ್ಟು ಮತದಾನ ಪ್ರಮಾಣವಾಗಿದೆ. ಚುನಾವಣಾ ಆಯೋಗದ ನಿಯಮದಂತೆ ಮತದಾನ ಪ್ರಕ್ರಿಯೆಯು ಬೆಳಿಗ್ಗೆ 07 ಗಂಟೆಗೆ ಪ್ರಾರಂಭಗೊAಡಿತು. ನಿಧಾನಗತಿಯಿಂದ ಆರಂಭಗೊAಡು ಸಂಜೆ ಹೊತ್ತಿಗೆ ಬಿರುಸು ಪಡೆಯಿತು. ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡುಬAದಿತು. ಬೆಳಿಗ್ಗೆ 7 ಗಂಟೆಯಿAದ 9 ಗಂಟೆವರೆಗೆ ಶೇ.09.07 ರಷ್ಟು, 11 ಗಂಟೆವರೆಗೆ ಶೇ.26.96 ರಷ್ಟು, ಮಧ್ಯಾಹ್ನ 1 ಗಂಟೆವರೆಗೆ ಶೇ.43.46 ರಷ್ಟು, ಮಧ್ಯಾಹ್ನ 3 ಗಂಟೆವರೆಗೆ ಶೇ.58.10 ರಷ್ಟು, ಸಂಜೆ 5 ಗಂಟೆವರೆಗೆ 71.47 ರಷ್ಟು ಹಾಗೂ ಮತದಾನ ಅವಧಿ ಮುಕ್ತಾಯನಂತರ ಅಂತಿಮವಾಗಿ ಶೇ.76.24 ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ. ಮತದಾನ ವಿವರ: ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,36,402 ಮತದಾರರಿದ್ದು, ಅದರಲ್ಲಿ 1,80,189 ಮತದಾರರು ತಮ್ಮ ಮತದ ಹಕ್ಕನ್ನು ಚಲಾಯಿಸಿದ್ದಾರೆ. 1,17,935 ಪುರುಷ ಮತದಾರರಲ್ಲಿ 90,922 ಪುರುಷರು ಮತ ಚಲಾಯಿಸಿದ್ದಾರೆ. 1,18,438 ಮಹಿಳಾ ಮತದಾರರಲ್ಲಿ 89,252 ಮಹಿಳೆಯರು ಮತದಾನ ಮಾಡಿದ್ದಾರೆ ಮತ್ತು 29 ಇತರೆ ಮತದಾರರ ಪೈಕಿ 12 ಮಂದಿ ಮತದಾನ ಮಾಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ