ಶುಕ್ರವಾರ, ಫೆಬ್ರವರಿ 7, 2025
ಫೆ.10 ರಂದು ವಿದ್ಯುತ್ ಗ್ರಾಹಕರ ಕುಂದು-ಕೊರತೆ ಸಭೆ
ಬಳ್ಳಾರಿ,ಫೆ.07(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ಉಪ-ವಿಭಾಗ 1 ಮತ್ತು 2ರ ಉಪವಿಭಾಗದ ಹೆಚ್‌ಟಿ ಮತ್ತು ಇಹೆಚ್‌ಟಿ ವಿದ್ಯುತ್ ಗ್ರಾಹಕರ ಕುಂದು-ಕೊರತೆ ಸಭೆಯನ್ನು ಫೆ.10 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ನಗರ ಜೆಸ್ಕಾಂನ ವಲಯ ಕಚೇರಿ ಮೊದಲ ಮಹಡಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಬಳ್ಳಾರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತ ಕಚೇರಿಯ ಅಧೀಕ್ಷಕ ಅಭಿಯಂತರರು ಮತ್ತು ಉಪ-ಲೆಕ್ಕ ನಿಯಂತ್ರಣಾಧಿಕಾರಿಯವರು ಅಧ್ಯಕ್ಷತೆ ವಹಿಸುವರು.
ಎಲ್ಲಾ ಹೆಚ್‌ಟಿ ಮತ್ತು ಇಹೆಚ್‌ಟಿ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಬೇಕು ಎಂದು ಬಳ್ಳಾರಿ ನಗರ ಉಪ-ವಿಭಾಗ-1 ಮತ್ತು ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ