ಶುಕ್ರವಾರ, ಫೆಬ್ರವರಿ 7, 2025

ಸಾರಿಗೆ ಇಲಾಖೆ: ಅರ್ಹತಾ ಪತ್ರ ನವೀಕರಿಸಿಕೊಳ್ಳಲು ಸೂಚನೆ

ಬಳ್ಳಾರಿ,ಫೆ.07(ಕರ್ನಾಟಕ ವಾರ್ತೆ): ಜಿಲ್ಲೆಯ ವಿವಿಧ ಶಾಲಾ ಮತ್ತು ಕಾಲೇಜುಗಳು ಹೊಂದಿರುವ ತಮ್ಮ ವಾಹನಗಳ ಅರ್ಹತಾ ಪತ್ರ ನವೀಕರಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಎಸ್.ಶ್ರೀನಿವಾಸಗಿರಿ ಅವರು ತಿಳಿಸಿದ್ದಾರೆ. ಅರ್ಹತಾ ಪತ್ರ ನವೀಕರಿಸಿಕೊಳ್ಳಲು ಈಗಾಗಲೇ ಆಯಾ ಶಾಲಾ-ಕಾಲೇಜುಗಳ 120 ವಾಹನಗಳ ಶಾಲಾ-ಕಾಲೇಜು ಮುಖ್ಯಸ್ಥರಿಗೆ ನೋಟಿಸ್ ನೀಡಲಾಗಿತ್ತು. ಅದರಲ್ಲಿ 11 ವಾಹನಗಳು ಅನುಪಯುಕ್ತತೆಗೊಳಿಸಿ 28 ವಾಹನಗಳಿಗೆ ಅರ್ಹತಾ ಪತ್ರ ನವೀಕರಿಸಲಾಗಿದೆ. ಒಟ್ಟು 6 ಶಾಲಾ-ಕಾಲೇಜುಗಳ ವಾಹನಗಳನ್ನು ತನಿಖೆ ಮಾಡಿ ತನಿಖಾ ವರದಿ ನೀಡಲಾಗಿದೆ. ಹಾಗಾಗಿ ಶಾಲಾ-ಕಾಲೇಜುಗಳ ಮುಖ್ಯಸ್ಥರು ತಮ್ಮ ಶಾಲಾ-ಕಾಲೇಜುಗಳ ವಾಹನಗಳ ಅರ್ಹತಾ ಪತ್ರ ನವೀಕರಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ