ಗುರುವಾರ, ಫೆಬ್ರವರಿ 6, 2025
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2025: ಕಿರು ಪುಸ್ತಕ, ಮೈಕ್ರೋ ಬುಕ್, ಮೈಕ್ರೋ ಜೆರಾಕ್ಸ್ ಮಾರಾಟ ಮತ್ತು ಉಪಯೋಗ ನಿರ್ಬಂಧ
ಬಳ್ಳಾರಿ,ಫೆ.06(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಪ್ರಸ್ತಕ ವರ್ಷ ನಡೆಯುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಮುಕ್ತ, ಪಾರದರ್ಶಕವಾಗಿ ನಡೆಸಲು ಮತ್ತು ಪರೀಕ್ಷಾ ಪಾವಿತ್ರö್ಯತೆ ಕಾಪಾಡಲು ಜಿಲ್ಲೆಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬAಧಿಸಿದ ಎಲ್ಲಾ ಕಿರು ಪುಸ್ತಕಗಳು, ಮೈಕ್ರೋ ಬುಕ್, ಮೈಕ್ರೋ ಜೆರಾಕ್ಸ್ಗಳನ್ನು ಮಾರಾಟ, ಖರೀದಿ ಮತ್ತು ಶಾಲಾ ಆವರಣದಲ್ಲಿ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಿ.ಉಮಾದೇವಿ ಅವರು ತಿಳಿಸಿದ್ದಾರೆ.
ಈ ಕುರಿತು ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಸುತ್ತೋಲೆ ಹೊರಡಿಸಿರುತ್ತಾರೆ. ಹಾಗಾಗಿ ಜಿಲ್ಲೆಯಲ್ಲಿನ ಎಲ್ಲಾ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಹಾಗೂ ಜೆರಾಕ್ಸ್ ಸೆಂಟರ್‌ಗಳ ಮಾಲೀಕರು ಕಿರು ಪುಸ್ತಕಗಳನ್ನು ಹಾಗೂ ಮೈಕ್ರೋ ಬುಕ್, ಮೈಕ್ರೋ ಜೆರಾಕ್ಸ್ಗಳನ್ನು ಮಾರಾಟ ಮಾಡುವುದಾಗಲೀ, ಖರೀದಿಸುವುದಾಗಲೀ ಅಥವಾ ಬಳಸುವುದಾಗಲೀ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಇದಕ್ಕೆ ಸಂಬAಧಿಸಿದ ಯಾವುದೇ ಕಾನೂನು ಬಾಹಿರವಾಗಿ ಕಂಡುಬAದಲ್ಲಿ ಸಂಬAಧಿಸಿದವರ ವಿರುದ್ಧ ಕಾನೂನಿನಲ್ಲಿನ ಅವಕಾಶ ಬಳಸಿಕೊಂಡು ಇಲಾಖೆಯು ವಿಚಾರಣೆ ನಡೆಸಿ ಇಂತಹ ಪ್ರಕರಣಗಳಲ್ಲಿ ಭಾಗಿಯಾದವರಿಗೆ 3ರಿಂದ 5 ವರ್ಷ ಜೈಲು, 5 ಲಕ್ಷ ದಂಡ ವಿಧಿಸುವ ಅವಕಾಶವಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ