ಸೋಮವಾರ, ಜೂನ್ 10, 2024

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ; ಜೂನ್ 15 ರಿಂದ 18 ರವರೆಗೆ ಸಾಧನ ಸಲಕರಣೆಗಳ ಮೌಲ್ಯ ಮಾಪನ ಶಿಬಿರ

ಬಳ್ಳಾರಿ,ಜೂ.10(ಕರ್ನಾಟಕ ವಾರ್ತೆ): ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಕೇಂದ್ರ ಸರ್ಕಾರದ ಆಡಿಪ್ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಅಲಿಂಕೋ ಸಂಸ್ಥೆಯಿಂದ ವಿಕಲಚೇತನರ ಹಾಗೂ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿತರಿಸಲು ಜೂನ್ 11 ರಿಂದ 18 ರವರೆಗೆ ತಾಲ್ಲೂಕುವಾರು ಮೌಲ್ಯ ಮಾಪನ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹೆಚ್.ಗೋವಿಂದಪ್ಪ ಅವರು ತಿಳಿಸಿದ್ದಾರೆ. ಮೌಲ್ಯ ಮಾಪನ ಶಿಬಿರಗಳಿಗೆ ಆಯಾ ತಾಲ್ಲೂಕಿನ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಶಿಬಿರಗಳಲ್ಲಿ ಪಾಲ್ಗೊಂಡು ತಮಗೆ ಅವಶ್ಯವಿರುವ ಸಾಧನ ಸಲಕರಣೆಗಳ ಪಡೆಯಲು ಹೆಸರುಗಳನ್ನು ನೋಂದಾಯಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. *ಶಿಬಿರದ ಸ್ಥಳ ಮತ್ತು ದಿನಾಂಕ* ಜೂನ್ 11 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಬಳ್ಳಾರಿ ನಗರದ ಜಿಲ್ಲಾ ಆಸ್ಪತ್ರೆ, ಜೂನ್ 12 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಬಳ್ಳಾರಿ ಗ್ರಾಮಾಂತರ ವ್ಯಾಪ್ತಿಯ ಜಿಲ್ಲಾ ಆಸ್ಪತ್ರೆ, ಜೂನ್ 13 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಸಿರುಗುಪ್ಪದ ತಾಲ್ಲೂಕು ಆಸ್ಪತ್ರೆ, ಜೂನ್ 14 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಕುರುಗೋಡು ತಾಲ್ಲೂಕು ಆಸ್ಪತ್ರೆ, ಜೂನ್ 15 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಕಂಪ್ಲಿ ತಾಲ್ಲೂಕು ಆಸ್ಪತ್ರೆ ಮತ್ತು ಜೂನ್ 18 ರಂದು ಸಂಡೂರಿನ ಎಪಿಎಂಸಿ ಸ್ಕೂಲ್ ಹತ್ತಿರ. *ತರಬೇಕಾದ ದಾಖಲಾತಿಗಳು* *ವಿಕಲಚೇತನರು:* ವಿಕಲಚೇತನರ ವಿಶಿಷ್ಠ ಗುರುತಿನ ಚೀಟಿ(ಯುಡಿಐಡಿ ಕಾರ್ಡ್ ಶೇ.40 ಮೇಲ್ಪಟ್ಟು), ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ (ಗರಿಷ್ಠ ರೂ.15 ಸಾವಿರ ಪ್ರತಿ ಮಾಹೆಗೆ), ರೇಷನ್ ಕಾರ್ಡ್, ಚುನಾವಣೆಯ ಗುರುತಿನ ಚೀಟಿ ಹಾಗೂ ಅಭ್ಯರ್ಥಿಯ 2 ಪಾಸ್‍ಪೋಟ್ ಸೈಜ್ ಫೋಟೋ. *ಹಿರಿಯ ನಾಗರಿಕರು:* ಹಿರಿಯ ನಾಗರಿಕರ ಗುರುತಿನ ಚೀಟಿ, ಪಡಿತರ ಚೀಟಿ (ಬಿಪಿಎಲ್ ಕಾರ್ಡ್), ಮಾಶಾಸನ ದಾಖಲಾತಿ, ಆಧಾರ ಕಾರ್ಡ್, ರೇಷನ್ ಕಾರ್ಡ್, ಚುನಾವಣೆಯ ಗುರುತಿನ ಚೀಟಿ, ಅಭ್ಯರ್ಥಿಯ 2 ಪಾಸ್‍ಪೋಟ್ ಸೈಜ್ ಫೋಟೋ. ಫಲಾನುಭವಿಗಳು ವೈದ್ಯಕಿಯ ತಪಾಸಣೆ ಶಿಬಿರಕ್ಕೆ ಹಾಜರಾಗುವ ಸಂದರ್ಭದಲ್ಲಿ ಎಲ್ಲಾ ಅಗತ್ಯ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಒದಗಿಸಬೇಕು. ಜಿಲ್ಲೆಯ ವಿಕಲಚೇತನರು, ಹಿರಿಯ ನಾಗರೀಕರು ತಪಾಸಣಾ ಶಿಬಿರದ ಆಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ