ಶುಕ್ರವಾರ, ಜೂನ್ 21, 2024

ಯುವಕರು ಯೋಗಾಸನ ಮಾಡುವುದರಿಂದ ರೋಗ ಮುಕ್ತರಾಗಬಹುದು: ಚಂದ್ರು

ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ): ಪ್ರತಿನಿತ್ಯ ಯೋಗ ಮಾಡುವುದರಿಂದ ಯುವಕರು ರೋಗ ಮುಕ್ತರಾಗಿ ಜೀವಿಸಬಹುದು ಎಂದು ಸರ್ಕಾರಿ ಮೆಟ್ರಿಕ್ ಪದವಿ ಪೂರ್ವ ವಿದ್ಯಾರ್ಥಿ ನಿಲಯಪಾಲಕ ಚಂದ್ರು ಅವರ ಹೇಳಿದರು. ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಇಬ್ರಾಹಿಂಪುರದ ಚಿಗುರು ಕಲಾ ತಂಡಾ ಇವರ ಸಂಯುಕ್ತಾಶ್ರಯದಲ್ಲಿ ಕೌಲ್‍ಬಜಾರ್‍ನ ಸರ್ಕಾರಿ ಮೆಟ್ರಿಕ್ ಪದವಿ ವಿದ್ಯಾರ್ಥಿ ನಿಲಯದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯೋಗಾಸನಗಳಿಂದ ಸರ್ವಾಂಗಗಳಿಗೆ ಉತ್ತಮ ಆರೋಗ್ಯ ದೊರೆಯಲಿದ್ದು, ವಿದ್ಯಾರ್ಥಿಗಳು ಯೋಗ ಮಾಡುವುದರಿಂದ ಏಕಾಗ್ರತೆ ಕಾಪಾಡಿಕೊಂಡು ಜ್ಞಾನ ವೃದ್ಧಿ ಮಾಡಿಕೊಳ್ಳಬಹುದು ಎಂದರು. ಚಿಗುರು ಕಲಾ ತಂಡದ ಅಧ್ಯಕ್ಷ ಎಸ್.ಎಂ,ಹುಲುಗುಪ್ಪ ಮತ್ತು ವಿಶ್ವ ಮಾನವ ಟ್ರಸ್ಟ್‍ನ ಅಧ್ಯಕ್ಷ ಎರ್ರಿಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದರು. ಈ ವೇಳೆ ನಾಗರಾಜ, ಲಕ್ಷ್ಮಿಕಾಂತ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ