ಶನಿವಾರ, ಜೂನ್ 15, 2024
ಕುರುಗೋಡು: ಸಹಾಯಧನಕ್ಕೆ ಅರ್ಜಿ ಆಹ್ವಾನ
ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ):
ಕುರುಗೋಡು ಪುರಸಭೆ ವತಿಯಿಂದ 2024-25ನೇ ಸಾಲಿಗೆ ಡೇ-ನಲ್ಮ್ ಯೋಜನೆಯ ಉಪಘಟಕಗಳ ಅಡಿ ವ್ಯಕ್ತಿಗತ ಉದ್ದಿಮೆಶೀಲತೆ ಹಾಗೂ ಗುಂಪು ಚಟುವಟಿಕೆ ಕೈಗೊಳ್ಳಲು ಸ್ವ-ಸಹಾಯ ಗುಂಪುಗಳು ಮತ್ತು ಎಸ್‍ಹೆಚ್‍ಜಿ ಗುಂಪುಗಳಿಗೆ ಕ್ರೆಡಿಟ್ ಲಿಂಕೇಜ್ ಬ್ಯಾಂಕ್‍ಗಳಿಂದ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಜುಲೈ 06 ಕೊನೆಯ ದಿನವಾಗಿರುತ್ತದೆ.
*ಬೇಕಾದ ದಾಖಲೆಗಳು:*
ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಭಾವಚಿತ್ರ, ನಿರ್ವಹಿಸುತ್ತಿರುವ ಉದ್ಯೋಗದ ಛಾಯಚಿತ್ರ, ಬ್ಯಾಂಕ್ ಪಾಸ್‍ಪುಸ್ತಕ, ಮತ್ತು ವಿಕಲಚೇತನರಿದ್ದಲ್ಲಿ, ವಿಕಲಚೇತನರ ಪ್ರಮಾಣ ಪತ್ರ ದಾಖಲೆಗಳನ್ನು ದ್ವಿ ಪ್ರತಿಯಲ್ಲಿ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕುರುಗೋಡು ಪುರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ