ಶುಕ್ರವಾರ, ಜೂನ್ 21, 2024

ಜೂನ್ 23 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.21(ಕರ್ನಾಕಟ ವಾರ್ತೆ); ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯ 110/11ಕೆ.ವಿ ಸೋಮಸಮುದ್ರ ವಿದ್ಯುತ್ ಉಪ-ಕೇಂದ್ರದ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದÀ ಜೂ.23 ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ 11 ಕೆ.ವಿ. ಫೀಡರ್ ವ್ಯಾಪ್ತಿಯ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಅಶೋಕ ರೆಡ್ಡಿ ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ಎಫ್-6 ಫೀಡರ್‍ನ ತಾಳೂರು ರೋಡ್, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್‍ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ಎಸ್.ಪಿ.ಸರ್ಕಲ್, ಶಾಸ್ತ್ರೀ ನಗರ, ಬ್ಯಾಂಕ್ ಕಾಲೋನಿ, ಬಸವನಕುಂಟೆ, ಸಿರುಗುಪ್ಪ ರೋಡ್, ರಾಮ ನಗರ, ಹವಂಬಾವಿ. ಎಫ್-10 ಫೀಡರ್‍ನ ಅಶೋಕ ನಗರ, ಹವಂಬಾವಿ, ಟಿ.ಎಂ.ಜಿ ಲೇಔಟ್, ರಾಮ ನಗರ, ಜಯನಗರ, ಗಾಯತ್ರಿ ನಗರ, ಭುವನಗಿರಿ ಕಾಲೋನಿ, ವೀರನಗೌಡ ಕಾಲೋನಿ, ಗಣೇಶ ನಗರ. ಎಫ್-14 ಫೀಡರ್‍ನ ಜಿಲ್ಲಾ ಕೋರ್ಟ್ ಸಂಕೀರ್ಣ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ