ಮಂಗಳವಾರ, ಜೂನ್ 18, 2024

ಅನಾಮದೇಯ ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜೂ.18(ಕರ್ನಾಟಕ ವಾರ್ತೆ): ನಗರದ ಟ್ರಾಮಾ ಕೇರ್ ಆಸ್ಪತ್ರೆಯ ಆವರಣದ ಪಾಕಿರ್ಂಗ್ ಪ್ರದೇಶದಲ್ಲಿ ಸುಮಾರು 45 ವರ್ಷದ ಅಸ್ವಸ್ಥ ಮಹಿಳೆಯು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು, ವಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಜೂ.15 ರಂದು ಮೃತಪಟ್ಟಿದ್ದು, ಮೃತ ಮಹಿಳೆಯ ವಾರಸುದಾರರ ಪತ್ತೆಗೆ ಸಹÀಕರಿಸಬೇಕೆಂದು ಕೌಲ್‍ಬಜಾರ್ ಪೆÇಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ಪೆÇಲೀಸ್ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಮೃತ ಮಹಿಳೆಯ ಚಹರೆ: ಎತ್ತರ ಅಂದಾಜು 5 ಅಡಿ 2 ಇಂಚು, ಕೋಲು ಮುಖ, ಗೋದಿ ಮೈಬಣ್ಣ, ತೆಳುವಾದ ಮೈಕಟ್ಟು ಇದ್ದು, ಕಪ್ಪು ಮತ್ತು ಬಿಳಿ ಕೂದಲು ಇರುತ್ತವೆ. ಮೃತಳ ಮೈಮೇಲೆ ಗುಲಾಬಿ ಬಣ್ಣದ ಶ್ವಟ್ಟರ್, ಪಾಚಿಗ್ರೀನ್ ಚೂಡಿದಾರ, ಬಿಳಿ ಮತ್ತು ಹಳದಿ ಮಿಶ್ರಿತ ಲೆಗ್ಗಿನ್ಸ್ ಧರಿಸಿರುತ್ತಾಳೆ. ಈ ಮೇಲ್ಕಂಡ ಚಹರೆ ಗುರುತುಳ್ಳ ಮೃತ ಮಹಿಳೆಯ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಕೌಲ್‍ಬಜಾರ್ ಪೆÇಲೀಸ್ ಠಾಣೆಯ ಮೊ:9480803047, 9480803084 ಅಥವಾ cowlbazarblr@ksp.gov.in ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ