ಶುಕ್ರವಾರ, ಜೂನ್ 14, 2024

ಜೂ.15 ರಂದು ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.14(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಎಮ್ಮಿಗನೂರಿನ 33/11ಕೆ.ವಿ ಉಪ-ಕೇಂದ್ರದಲ್ಲಿರುವ 11ಕೆ.ವಿ ಮಾರ್ಗಗಳ ಭಾರವನ್ನು ಹೊಸದಾಗಿ ನಿರ್ಮಿಸಿರುವ 110/11ಕೆ.ವಿ ಉಪ-ಕೇಂದ್ರಕ್ಕೆ ವರ್ಗಾಯಿಸುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜೂನ್ 15 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಳಗಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-01 ಫೀಡರ್‍ನ ಗುತ್ತಿಗನೂರ ಐಪಿ ಮಾರ್ಗದ ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು ಗ್ರಾಮ. ಎಫ್-02 ಫೀಡರ್‍ನ ಸೋಮಲಾಪುರ ಐಪಿ ಮಾರ್ಗದ ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್. ಎಫ್-03 ಫೀಡರ್‍ನ ಎಮ್ಮಿಗನೂರು ಪಟ್ಟಣ ಮಾರ್ಗದ ಎಮ್ಮಿಗನೂರು, ತಿಮ್ಮನಕೆರೆ, ಓರ್ವಾಯಿ, ಗುತ್ತಿಗನೂರು ಪಟ್ಟಣಸೆರಗು. ಎಫ್-04 ಫೀಡರ್‍ನ ಮುದ್ದಾಪುರ ಐಪಿ ಮಾರ್ಗ ಎಮ್ಮಿಗನೂರು, ಬಳಾಪುರ, ಮುದ್ದಾಪುರ. ಎಫ್-05 ಫೀಡರ್‍ನ ನೆಲ್ಲುಡಿ ಎನ್‍ಜೆವೈ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಲಾಪುರ ಮೆಹಬೂಬ ನಗರ್, ನೆಲ್ಲುಡಿ ಕೊಟ್ಟಾಲ್, ಶಾಂತಿನಗರ, ಶಂಕರ್‍ಸಿಂಗ್ ಕ್ಯಾಂಪ್, ಸುಬ್ಬಾರಾವ್ ಕ್ಯಾಂಪ್. ಎಫ್-06 ಫೀಡರ್‍ನ ನೆಲ್ಲುಡಿ ಐಪಿ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಮೆಹಬೂಬ ನಗರ್, ಶಾಂತಿನಗರ, ಶಂಕರ್‍ಸಿಂಗ್ ಕ್ಯಾಂಪ್, ನೆಲ್ಲುಡಿ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ