ಬುಧವಾರ, ಜೂನ್ 19, 2024
ಜೂ.20 ರಂದು ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ):
ನಗರದ ಅಲ್ಲಿಪುರ ಮಹಾದೇವ ತಾತನವರ ಜಾತ್ರೆ ನಿಮಿತ್ತ ಜೆಸ್ಕಾಂ ನಗರ ಉಪ ವಿಭಾಗ-1ರ ವ್ಯಾಪ್ತಿಯ 220/11 ಕೆವಿ ಅಲ್ಲಿಪುರ ವಿದ್ಯುತ್ ವಿತರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಫ್-34 ವಿದ್ಯುತ್ ಫೀಢರ್‍ಗೆ ಒಳಪಡುವ ಪ್ರದೇಶಗಲ್ಲಿ ಜೂ.20 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಜೆಸ್ಕಾಂನ ನಗರ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಂತರರಾದ ಇ.ಟಿ ಲಕ್ಮೀ ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು*:
ವಡ್ಡೆ ನಾಗಪ್ಪ ಲೇಔಟ್, ಮೊಹಮ್ಮದಿಯಾ ಸ್ಕೂಲ್, ರೆಡಿಯೋ ಪಾರ್ಕ್, ಕೌಲ್ ಬಜಾರ್, ನಲಾ ಸ್ಟ್ರೀಟ್, ಪೊಲೀಸ್ ಸ್ಟೇಷನ್, ಉರ್ದು ಟ್ರೈನಿಂಗ್ ಸ್ಕೂಲ್ ಸೇರಿದಂತೆ ಇನ್ನು ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ