ಶುಕ್ರವಾರ, ಜೂನ್ 21, 2024

ಮಹಿಳೆ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಜೂ.21(ಕರ್ನಾಟಕ ವಾತೆ): ಕುರುಗೋಡು ತಾಲ್ಲೂಕಿನ ಗೆಣಿಕೆಹಾಳ್ ಗ್ರಾಮದ ಕಲ್ಪನಾ.ಎಂ ಎನ್ನುವ 24 ವರ್ಷದ ಮಹಿಳೆ ಜೂ.17 ರಂದು ಕಾಣೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಕಾಣೆಯಾದ ಮಹಿಳೆಯ ಚಹರೆ: ಎತ್ತರ 5.0 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಭಾಗದ ಕುತ್ತಿಗೆ ಹತ್ತಿರ ಸಣ್ಣದಾದ ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ನಶಿ ಕಲರ್ ಬಾರ್ಡರ್ ಸೀರೆ ಧರಿಸಿದ್ದು, ಕನ್ನಡ, ತೆಲುಗು ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮಹಿಳೆಯ ಸಂಬಂಧಿಕರ ಬಗ್ಗೆ ಸುಳಿವು ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ದೂ:08932-250100, ಮೊ:9480803062, ಸಂಡೂರು ವೃತ್ತದ ಸಿಪಿಐ ದೂ:08395-260100, ಮೊ:9480803036, ತೋರಣಗಲ್ಲು ಡಿವೈಎಸ್‍ಪಿ ಮೊ:9480803010, ಬಳ್ಳಾರಿ ಎಸ್‍ಪಿ ದೂ:08392-258300 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ:08392-279100 ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ