ಗುರುವಾರ, ಜೂನ್ 20, 2024
ತಾಯಿ, ಮಗಳು ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ):
ತಾಲ್ಲೂಕಿನ ತೆಗ್ಗಿನ ಬೂದಿಹಾಳ್ ಗ್ರಾಮದ ನಿವಾಸಿ ಆಶಾ ಎನ್ನುವ 28 ವರ್ಷದ ಮಹಿಳೆ ಹಾಗೂ ಮಗಳಾದ ಪೂರ್ವಿಕಾ ಎನ್ನುವ 9 ವರ್ಷದ ಬಾಲಕಿಯು ಜೂ.15 ರಂದು ಕಾಣೆಯಾಗಿರುವ ಕುರಿತು ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣೆಯ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ: ಎತ್ತರ 5.3 ಅಡಿ, ಕೋಲುಮುಖ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಸೀರೆ ಮತ್ತು ಕುಪ್ಪಸ ಧರಿಸಿರುತ್ತಾಳೆ.
ಕಾಣೆಯಾದ ಬಾಲಕಿಯ ಚಹರೆ: ಎತ್ತರ 3.5 ಅಡಿ, ಅಡಿ, ಕೋಲುಮುಖ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಬಿಳಿ ಮತ್ತು ಕಂದು ಬಣ್ಣದ ಗೌನ್ ಧರಿಸಿರುತ್ತಾಳೆ.
ತಾಯಿ ಮತ್ತು ಮಗಳ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08392-258100 ಅಥವಾ 100, ಎಸ್‍ಪಿ ಅವರ ದೂ.08392-258400, ಬಳ್ಳಾರಿ ಗ್ರಾಮಾಂತರ ಡಿಎಸ್‍ಪಿ ದೂ.08392-276000, ಬಳ್ಳಾರಿ ಗ್ರಾಮೀಣ ವೃತ್ತ ಸಿಪಿಐ ದೂ.08392-276461, ಪಿಡಿ ಹಳ್ಳಿ ಪೊಲೀಸ್ ಠಾಣೆಯ ದೂ.08392-265010, ಪಿಎಸ್‍ಐ ಮೊ.9480803052 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ