ಗುರುವಾರ, ಜೂನ್ 20, 2024
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ):
ತಾಲ್ಲೂಕಿನ ಯಾಳ್ಪಿ ಗ್ರಾಮದ ಹೊಸಕೋಟೆ ರಸ್ತೆಯ ಹೊಲದ ಬದುವಿನ ಹತ್ತಿರ ಸುಮಾರು 50 ರಿಂದ 55 ವರ್ಷದ ಅನಾಮಧೇಯ ವ್ಯಕ್ತಿಯು ಕೊಳೆತ ಸ್ಥಿತಿಯಲ್ಲಿ ಜೂ.06 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಪಿಡಿ ಹಳ್ಳಿ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ.
ಚಹರೆ ಗುರುತು: ಅಂದಾಜು 5 ಅಡಿ ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡನೇಯ ಮುಖ ಹೊಂದಿದ್ದು, ಬಿಳಿ ಆಫ್ ಟಿ-ಶರ್ಟ್, ನೀಲಿ ಬರ್ಮೋಡಾ ನಿಕ್ಕರ್ ಧರಿಸಿರುತ್ತಾನೆ.
ಅನಾಮಧೇಯ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08392-258100 ಅಥವಾ 100, ಎಸ್‍ಪಿ ಅವರ ದೂ.08392-258400, ಬಳ್ಳಾರಿ ಗ್ರಾಮಾಂತರ ಡಿಎಸ್‍ಪಿ ದೂ.08392-276000, ಬಳ್ಳಾರಿ ಗ್ರಾಮೀಣ ವೃತ್ತ ಸಿಪಿಐ ದೂ.08392-276461, ಪಿಡಿ ಹಳ್ಳಿ ಪೊಲೀಸ್ ಠಾಣೆಯ ದೂ.08392-265010, ಪಿಎಸ್‍ಐ ಮೊ.9480803052 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ