ಬುಧವಾರ, ಜೂನ್ 26, 2024

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜೂ.26(ಕರ್ನಾಟಕ ವಾರ್ತೆ): ನಗರದ ವಿಮ್ಸ್ ಆವರಣದಲ್ಲಿನ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಅಂದಾಜು 45 ವರ್ಷದ ಅನಾಮಧೇಯ ವ್ಯಕ್ತಿ ಅಸ್ವಸ್ಥನಾಗಿ ಬಿದ್ದಿದ್ದು, ಚಿಕಿತ್ಸೆಗೆ ದಾಖಲಿಸಿ, ಫಲಕರಿಸದೇ ಜೂ.24 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಮಾಹಿತಿ ಇರುವುದಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಕೌಲ್ ಬಜಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಮೃತನ ಚಹರೆ ಗುರುತು: ಅಂದಾಜು 45 ವರ್ಷ ವಯಸ್ಸು, ತೆಳುವಾದ ಮೈಕಟ್ಟು, ದುಂಡು ಮುಖ, ಸಾಧಾರಣ ಎಣ್ಣೆಗೆಂಪು ಮೈಬಣ್ಣ, ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡ ಮೀಸೆ ಹೊಂದಿರುತ್ತಾನೆ. ಮೈಮೇಲೆ ಬಿಳಿ ನೀಲಿ ಮತ್ತು ವಿವಿದ ಬಣ್ಣಗಳ ಚೌಕಳಿಯ ಶರ್ಟ್ ಮಾತ್ರ ಇದ್ದು, ಇತರೆ ವಸ್ತುಗಳು ಇರುವುದಿಲ್ಲ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ಮೊ.9480803047, 9480803084 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ