ಗುರುವಾರ, ಜೂನ್ 20, 2024
ಕಂಪ್ಲಿ: ಸ್ವ-ಸಹಾಯ ಗುಂಪುಗಳಿಗೆ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ):
ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮದ ವ್ಯಕ್ತಿಗತ ಉದ್ಯಮಶೀಲತೆ ಘಟಕದಡಿ ಸಾಲ-ಸೌಲಭ್ಯ ಪಡೆಯಲು ಸ್ವ-ಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಒಟ್ಟು 17 ಫಲಾನುಭವಿಗಳ ಗುರಿ ನಿಗದಿಪಡಿಸಿದ್ದು, ಬ್ಯಾಂಕ್ ವಿಧಿಸುವ ಶೇ.7 ರ ಮೇಲ್ಪಟ್ಟು ಶೇಖಡವಾರು ಬಡ್ಡಿ ಮೊತ್ತವನ್ನು (ಬಡ್ಡಿ ಸಹಾಯಧನ) ಭರಿಸಲಾಗುವುದು.
ಜುಲೈ 04 ರೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್‍ಕಾರ್ಡ್, ಯೋಜನಾ ವರದಿ, ಪಾಸ್‍ಪೋರ್ಟ್ ಅಳತೆಯ ಎರಡು ಭಾವಚಿತ್ರ, ಸ್ವ-ಸಹಾಯ ಗುಂಪುಗಳ ಭಾವಚಿತ್ರ ಹಾಗೂ ಗುಂಪಿಗೆ ಸಂಬಂಧಪಟ್ಟ ದಾಖಲಾತಿ ಮತ್ತು ಯೋಜನಾ ವರದಿಯನ್ನು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಂಪ್ಲಿ ಪುರಸಭೆ ಕಾರ್ಯಾಲಯ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ