ಶುಕ್ರವಾರ, ಜೂನ್ 21, 2024

ಜೂನ್ 23 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.21(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಸೋಮಸಮುದ್ರ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ 110/11ಕೆ.ವಿ ಸೋಮಸಮುದ್ರ ವಿದ್ಯುತ್ ಉಪ-ಕೇಂದ್ರ ಮತ್ತು 33/11ಕೆ.ವಿ ಗುಡದೂರು ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮೀಣ ಪ್ರದೇಶಗಳಲ್ಲಿ ಜೂ.23 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-1 ಎನ್.ಜೆ.ವೈ ಮಾರ್ಗದ ಬಾಲಾಜಿ ನಗರ್ ಕ್ಯಾಂಪ್ ವ್ಯಾಪ್ತಿಯ ಕೊರ್ಲಗುಂದಿ ವಿಜಯನಗರ ಕ್ಯಾಂಪ್ ಜಾಲಿಬೆಂಜಿ, ಬಾಲಾಜಿನಗರ ಕ್ಯಾಂಪ್, ಜ್ಯಾಲಿಬೆಂಜಿ. ಎಫ್-2 ಐ.ಪಿ ಸೆಟ್ ಫೀಡರ್ ಮಾರ್ಗದ ಸೋಮಸಮುದ್ರ ವ್ಯಾಪ್ತಿಯ ಸೋಮಸಮುದ್ರ ವಕ್ರಾಣಿ ಕ್ಯಾಂಪ್, ಲಕ್ಷ್ಮಿನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೂಳೂರು, ಮಧುರೆ, ಕೊಳಗಲ್ಲು ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್, ಹಾಗೂ ಕೃಷಿ ಪ್ರದೇಶಗಳು. ಎಫ್-3 ಶ್ರೀಧರಗಡ್ಡೆ ಎನ್.ಜೆ.ವೈ ಫೀಡರ್ ಮಾರ್ಗದ ವ್ಯಾಪ್ತಿಯ ಸೋಮಸಮುದ್ರ, ವಕ್ರಾಣಿ ಕ್ಯಾಂಪ್, ಲಕ್ಷ್ಮೀನಗರ ಕ್ಯಾಂಪ್, ವೀರಾಂಜಿನೇಯ್ಯ ಕ್ಯಾಂಪ್, ಕೋಳೂರು, ಮದಿರೆ, ಭಾಗ್ಯನಗರ ಕ್ಯಾಂಪ್, ಮಲ್ಲಾರೆಡ್ಡಿ ಕ್ಯಾಂಪ್/ಗ್ರಾಮಗಳು. ಕೋಳೂರು ಕ್ರಾಸ್, ದಮ್ಮೂರು, ಡಿ.ಕಗ್ಗಲ್ ವಿ.ಟಿ.ಕ್ಯಾಂಪ್. ಎಫ್-4 ಐ.ಪಿ ಸೆಟ್ ಕೊರ್ಲಗುಂದಿ ಫೀಡರ್ ಮಾರ್ಗದ ವ್ಯಾಪ್ತಿಯ ಕೊರ್ಲಗುಂದಿ ಬಾಲಾಜಿನಗರ ಕ್ಯಾಂಪ್, ಜ್ಯಾಲಿಬೆಂಜಿ, ಶ್ರೀಧರಗಡ್ಡ, ವಿಜಯನಗರ ಕ್ಯಾಂಪ್ ಹಾಗೂ ಕೃಷಿ ಪ್ರದೇಶಗಳು. ಎಫ್-5 ಡಾಕ್ಟರ್ ಕ್ಯಾಂಪ್ ವ್ಯಾಪ್ತಿಯ ಶ್ರೀಧರಗಡ್ಡೆ, ಗುಡಾರ್. ಎಫ್-01 ಡಿ.ಕಗ್ಗಲ್ ಐ.ಪಿ ಮಾರ್ಗದ ಡಿ.ಕಗ್ಗಲ್ ಕೃಷಿ ಪ್ರದೇಶಗಳು. ಎಫ್-02 ಗುಡದೂರು ಐ.ಪಿ ಮಾರ್ಗದ ಗುಡದೂರು, ಹಂದಿಹಾಳ್ ಹಾಗೂ ಕೃಷಿ ಪ್ರದೇಶಗಳು. ಎಫ್-03 ಹಂದಿಹಾಳ್ ಐ.ಪಿ ಮಾರ್ಗದ ಹಂದಿಹಾಳ್ ಚಾನಾಳ್ ಹಾಗೂ ಕೃಷಿ ಪ್ರದೇಶಗಳು. ಎಫ್-04 ಗುಡದೂರು ಎನ್‍ಜೆವೈ ಐ.ಪಿ ಮಾರ್ಗದ ಹಂದಿಹಾಳ್, ಚಾನಾಳ್, ಗುಡದೂರು ಹಾಗೂ ಕೃಷಿ ಪ್ರದೇಶಗಳು. ಎಫ್-05 ಚಾನಾಳ್ ಐ.ಪಿ ಮಾರ್ಗದ ಚಾನಾಳ್ ಕೃಷಿ ಪ್ರದೇಶಗಳು ಸೇರಿದಂತೆ ಇನ್ನೂ ಮುಂತಾದ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ