ಗುರುವಾರ, ಜೂನ್ 20, 2024

ವಸತಿ ನಿಲಯ ಕಟ್ಟಡ ಬಾಡಿಗೆಗೆ ಬೇಕಾಗಿದೆ

ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ): ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಸಂಖ್ಯಾಬಲ 125 ಇದ್ದು, ವಿದ್ಯಾರ್ಥಿಗಳ ವಾಸಕ್ಕೆ ಮೂಲಭೂತ ಸೌಕರ್ಯ ಇರುವ ಸುಸಜ್ಜಿತ ಕಟ್ಟಡವಿದ್ದಲ್ಲಿ ಬಾಡಿಗೆ ನೀಡಲು ಆಸಕ್ತ ಮಾಲೀಕರು ಸಂಪರ್ಕಿಸಬಹುದು ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪದ ತಾಲ್ಲೂಕು ಕಚೇರಿ ಆವರಣದ ಸಾಮಥ್ರ್ಯ ಸೌಧದ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ದೂ.08396-220414 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ