ಮಂಗಳವಾರ, ಜೂನ್ 11, 2024
ತಾತ್ಕಾಲಿಕ ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
ಬಳ್ಳಾರಿ,ಜೂ.11(ಕರ್ನಾಟಕ ವಾರ್ತೆ):
ಸಮಗ್ರ ಶಿಕ್ಷಣ ಅಭಿಯಾನದ ವತಿಯಿಂದ 2024-25ನೇ ಶೈಕ್ಷಣಿಕ ಸಾಲಿಗೆ ಬಳ್ಳಾರಿ ಸಮನ್ವಯ ಶಿಕ್ಷಣ ವಿಭಾಗದಡಿ ಖಾಲಿ ಇರುವ ಬಿಐಇಆರ್‍ಟಿ ಪ್ರಾಥಮಿಕ, ಪ್ರೌಢ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಅಡಿ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ತಿಳಿಸಿದ್ದಾರೆ.
*ಅರ್ಹತೆ:*
ಪ್ರಾಥಮಿಕ 1-5 (ಡಿ.ಇಡಿ ವಿಶೇಷ ಶಿಕ್ಷಣದೊಂದಿಗೆ ಆರ್‍ಸಿಐ ಸಿಆರ್‍ಆರ್ ಸಂಖ್ಯೆ ಮಾನ್ಯತೆ ಹೊಂದಿರಬೇಕು), ಪ್ರಾಥಮಿಕ 6-8 (ಬಿ.ಇಡಿ ವಿಶೇಷÀ ಶಿಕ್ಷಣದೊಂದಿಗೆ ಆರ್‍ಸಿಐ ಸಿಆರ್‍ಆರ್ ಸಂಖ್ಯೆ ಮಾನ್ಯತೆ ಹೊಂದಿರಬೇಕು) ಮತ್ತು ಪ್ರೌಢ 9-12 (ಬಿ.ಇಡಿ ವಿಶೇಷÀ ಶಿಕ್ಷಣದೊಂದಿಗೆ ಆರ್‍ಸಿಐ ಸಿಆರ್‍ಆರ್ ಸಂಖ್ಯೆ ಮಾನ್ಯತೆ ಹೊಂದಿರಬೇಕು).
ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.
ಈ ಹಿಂದೆ ಈ ಇಲಾಖೆಯಲ್ಲಿ ಬಿಐಇಆರ್‍ಟಿಯಾಗಿ ಕಾರ್ಯನಿರ್ವಹಿಸಿರುವÀ ಅಭ್ಯರ್ಥಿಗಳಿಗೆ ಸೇವಾ ಜೇಷ್ಠತೆಯನ್ನು ಪರಿಗಣಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರದ ಕೋಟೆ ಪ್ರದೇಶದ ಸಮಗ್ರ ಶಿಕ್ಷಣ ಇಲಾಖೆಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಮತ್ತು ಉಪನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ