ಸೋಮವಾರ, ಜೂನ್ 10, 2024

ಪ್ರಶಾಂತ್ ಎನ್.ಎಸ್ ಅವರಿಗೆ ಪಿಹೆಚ್‍ಡಿ ಪದವಿ

ಬಳ್ಳಾರಿ,ಜೂ.10(ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿ ಪ್ರಶಾಂತ್ ಎನ್.ಎಸ್ ಅವರಿಗೆ ಪಿಹೆಚ್‍ಡಿ ಪದವಿ ಲಭಿಸಿದೆ. ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಶಾಂತ ಕುಮಾರ.ಟಿ.ಎಂ ಅವರ ಮಾರ್ಗದರ್ಶನದಲ್ಲಿ “ಸ್ಟಡಿ ಆಫ್ ಟೀಚರ್ ವ್ಯಾಲ್ಯೂಸ್ ಮತ್ತು ಟೀಚರ್ ಮೋಟಿವೆಷನ್ ಆನ್ ಟೀಚರ್ ಸೆಲ್ಪ್-ಎಫಿಕೆಸಿ ಅಮೊಂಗ್ ಟೀಚರ್ ಎಜ್ಯುಕೇಟರ್ಸ್” ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಈ ಮಹಾ ಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ಪ್ರದಾನ ಮಾಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ