ಬುಧವಾರ, ಜೂನ್ 5, 2024

ಅನಾಮಧೇಯ ಮೃತ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ, ಜೂ.05(ಕರ್ನಾಟಕ ವಾರ್ತೆ): ಸಿರುಗುಪ್ಪದ ಹೈಸ್ಕೂಲ್ ಮೈದಾನ ಬಳಿ ಕಾರ್ ಪಾರ್ಕಿಂಗ್ ಸ್ಥಳದ ಹತ್ತಿರ ಅಂದಾಜು 55 ರಿಂದ 60 ವರ್ಷದ ಅನಾಮಧೇಯ ವ್ಯಕ್ತಿಯ ಮೃತ ದೇಹವು ಜೂ.01 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಸಿರುಗುಪ್ಪ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ 5.4 ಅಡಿ, ದುಂಡು ಮುಖ, ಕಪ್ಪನೆ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಣ್ಣಿನ ರೆಪ್ಪೆಗಳ ಮೇಲೆ ಪುರುಪುಲ್ಲೆಗಳು ಇರುತ್ತವೆ. ಮೃತನ ದೇಹದ ಮೇಲೆ ಬಿಳಿ ನೀಲಿ ಹಳದಿ ಬಣ್ಣ ಮಿಶ್ರಿತ ಅರ್ಧ ತೋಳಿನ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ನೀಲಿ ಮತ್ತು ಕಪ್ಪು-ಬಿಳಿ ಬಣ್ಣದ ಚಡ್ಡಿ ಧರಿಸಿರುತ್ತಾನೆ. ಈ ಮೇಲ್ಕಾಣಿಸಿದ ಚಹರೆ ಗುರುತುಗಳುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಸಿರುಗುಪ್ಪ ಪೊಲೀಸ್ ಠಾಣೆಯ ಪಿ.ಎಸ್.ಐ ದೂ.08396220333 ಸಿರುಗುಪ್ಪ ವೃತ್ತದ ಸಿ.ಪಿ.ಐ ದೂ.08396220003, ಬಳ್ಳಾರಿ ಗ್ರಾಮೀಣ ಉಪ ವಿಭಾಗದ ಡಿ.ಎಸ್.ಪಿ ದೂ.08392276000 ಅಥವಾ ಬಳ್ಳಾರಿ ಎಸ್.ಪಿ ದೂ.08392258400 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ