ಸೋಮವಾರ, ಜೂನ್ 10, 2024

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಜೂ.10(ಕರ್ನಾಟಕ ವಾರ್ತೆ): ನಗರದ ರೈಲ್ವೇ ನಿಲ್ದಾಣದ ಬುಕ್ಕಿಂಗ್ ಕೌಂಟರ್ ಮುಂಭಾಗ ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದ ಅಂದಾಜು 50 ವರ್ಷದ ಅನಾಮಧೇಯ ವ್ಯಕ್ತಿಯನ್ನು ತುರ್ತಾಗಿ ಅಂಬ್ಯುಲೆನ್ಸ್ ಮೂಲಕ ವಿಮ್ಸ್‍ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಜೂ.09 ರಂದು ಮೃತ ಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಮೃತನ ಚಹರೆ: ಅಂದಾಜು ಎತ್ತರ 5.6 ಅಡಿ, ಕೋಲು ಮುಖ, ಬಡಕಲು ದೇಹ, ಗೋಧಿ ಮೈಬಣ್ಣ ದಪ್ಪ ಮೂಗು, ಅಗಲವಾದ ಹಣೆ ಹೊಂದಿದ್ದು, ತಲೆಯಲ್ಲಿ ಮೂರು ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು ಮತ್ತು ಒಂದು ಇಂಚು ಬಿಳಿ ಮಿಶ್ರಿತ ಕಪ್ಪು ಮೀಸೆ, ಗಡ್ಡ ಇರುತ್ತದೆ. ಮೃತನ ಮೈ ಮೇಲೆ ನೀಲಿ ಬಣ್ಣದ ತುಂಬು ತೋಳಿನ ರೆಡಿಮೇಡ್ ಜೀನ್ಸ್ ಶರ್ಟ್, ಬಿಳಿ ಬಣ್ಣದ ಲುಂಗಿ ಹಾಗೂ ನೀಲಿ ಬಣ್ಣದ ಒಳಉಡುಪು ಧರಿಸಿರುತ್ತಾನೆ. ಈ ಮೇಲ್ಕಂಡ ಮೃತನ ಚಹರೆ ಗುರುತುಗಳುಳ್ಳ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರ ಮೊ.9480802131 ಅಥವಾ ರಾಯಚೂರು ರೈಲ್ವೆ ಪೊಲೀಸ್ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ