ಮಂಗಳವಾರ, ಅಕ್ಟೋಬರ್ 1, 2024

ಸ್ವಚ್ಚ ನಗರ ನಿರ್ಮಿಸಿಲು ಪ್ರತಿಯೊಬ್ಬರೂ ಕೈ ಜೋಡಿಸಿ: ಮೇಯರ್ ಮುಲ್ಲಂಗಿ ನಂದೀಶ್

ಬಳ್ಳಾರಿ,ಅ.01(ಕರ್ನಾಟಕ ವಾರ್ತೆ): ಜನಸಾಮಾನ್ಯರ ಆರೋಗ್ಯ ಸುಸ್ಥಿರಗೊಳ್ಳಲು ನಗರದಲ್ಲಿನ ವಿವಿಧ ಪ್ರದೇಶಗಳಲ್ಲಿ ಶುಚಿತ್ವ ಕಾಪಾಡುವುದು ಅಗತ್ಯವಾಗಿದೆ. ಸ್ವಚ್ಚ ನಗರ ನಿರ್ಮಿಸಲು ಅಧಿಕಾರಿಗಳು, ಪೌರಕಾರ್ಮಿಕರು, ದಿನಗೂಲಿ ಕಾರ್ಮಿಕರು, ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನೆಹರು ಯುವ ಕೇಂದ್ರ, ರಾಷ್ಟಿçÃಯ ಅಂಕಿ ಸಂಖ್ಯೆಗಳ ಇಲಾಖೆ, ಸಾಯಿ ಸಂಸ್ಥೆ ಹಾಗೂ ಲಿಯಾ ಯೂತ್ ಅಸೋಸಿಯೇಷನ್ ವತಿಯಿಂದ ನಗರದ ಡಾ.ರಾಜ್‌ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತೆಯ ಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 39 ವಾರ್ಡ್ಗಳಲ್ಲಿ ದಿನನಿತ್ಯವೂ ಕಸ ವಿಲೇವಾರಿ ನಡೆಯುತ್ತಲಿದ್ದು, ಸಾರ್ವಜನಿಕರು ಕಸ ವಿಲೇವಾರಿ ವಾಹನಗಳಿಗೆ ತ್ಯಾಜ್ಯ ನೀಡಬೇಕು ಎಂದು ಕರೆ ನೀಡಿದರು. ರಾಷ್ಟಿçÃಯ ಅಂಕಿ ಸಂಖ್ಯೆಗಳ ಇಲಾಖೆಯ ಅಧಿಕಾರಿ ಮನೀಶ್ ಅವರು ಮಾತನಾಡಿ, ಪ್ರತಿಯೊಬ್ಬ ನಾಗರಿಕರು ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು. ನಮ್ಮ ಸುತ್ತ ಮುತ್ತಲಿನ ಪ್ರದೇಶಗಳು ಸ್ವಚ್ಛತೆಯಿಂದ ಕೂಡಿದ್ದರೆ ರೋಗಗಳು ಬರುವುದಿಲ್ಲ. ಪರಿಸರ ಮಾಲಿನ್ಯವೂ ಆಗುವುದಿಲ್ಲ, ಎಲ್ಲರ ಆರೋಗ್ಯ ಚೆನ್ನಾಗಿರುತ್ತದೆ ಎಂದು ಅವರು ತಿಳಿಸಿದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಟೋಪಿ ಮತ್ತು ಪುಸ್ತಕ-ಪೆನ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ದಾದಾಪೀರ್, ಲಿಯಾ ಯೂತ್ ಅಸೋಸಿಯೇಷÀನ್ ಅಧ್ಯಕ್ಷ ಅಬ್ರಾಹಮ್, ಪಾಲಿಕೆಯ ಸದಸ್ಯರು ಸೇರಿದಂತೆ ಸಾರ್ವಜನಿಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. *ಜಾಗೃತಿ ಜಾಥಾ:* ಜಾಗೃತಿ ಜಾಥಾವು ನಗರದ ಡಾ.ರಾಜ್‌ಕುಮಾರ್ ರಸ್ತೆಯ ಮುನಿಸಿಪಾಲ್ ಕಾಲೇಜು ಆವರಣದಿಂದ ಆರಂಭಗೊAಡು ಸಂಗA ವೃತ್ತದಿಂದ ಶ್ರೀರಾಂಪುರ ಕಾಲೋನಿಯವರೆಗೆ ನಡೆಯಿತು. ಜಾಥಾದಲ್ಲಿ ಚಿಗುರು ಕಲಾ ತಂಡದ ಹುಲುಗಪ್ಪ, ಸುಂಕಪ್ಪ ಸೇರಿ ತಂಡದವರಿAದ ಸ್ವಚ್ಛತಾ ಕುರಿತು ಜಾಗೃತಿ ಗೀತೆ ಹಾಡಿದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ