ಮಂಗಳವಾರ, ಅಕ್ಟೋಬರ್ 1, 2024

ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಕ್ರಮ ವಹಿಸಿ, ಸೊಳ್ಳೆಯಿಂದ ಹರಡುವ ರೋಗ ತಡೆಯಲು ಸಹಕರಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು

ಬಳ್ಳಾರಿ,ಅ.01(ಕರ್ನಾಟಕ ವಾರ್ತೆ): ಮನೆಯ ಹೊರಭಾಗದಲ್ಲಿ ಮಳೆ ನೀರು ನಿಲ್ಲುವ ಬೀಸಾಡಿದ ಟೈರ್, ತಗಡಿನ್ ಟಿನ್, ಪ್ಲಾಸ್ಟಿಕ್ ಕಫ್ ಮತ್ತು ಹೂವಿನ ಕುಂಡಲುಗಳಲ್ಲಿ 7 ದಿನಗಳಿಗಿಂತ ಹೆಚ್ಚು ಸತತವಾಗಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ನೀರಿನಲ್ಲಿ ಉತ್ಪತ್ತಿಯಾಗುವ ಡೆಂಗ್ಯೂ, ಚಿಕಿನ್ ಗುನ್ಯಾ ಹರಡುವ ಈಡೀಸ್ ಇಜಿಪ್ಟೆöÊ ಸೊಳ್ಳೆಯ ಮರಿ ಉತ್ಪತ್ತಿಯಾಗದಂತೆ ತಡೆಯುವ ಮೂಲಕ ರೋಗ ಹರಡದಂತೆ ಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಂಡಿಹಟ್ಟಿ ಸಹಕಾರದೊಂದಿಗೆ ಪ್ರತಿ ಮಂಗಳವಾರದAದು ಡೆಂಗ್ಯೂ ಹರಡುವ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯವನ್ನು ಬಂಡಿಹಟ್ಟಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಮನೆಯ ಬಳಕೆಗಾಗಿ ಸಂಗ್ರಹಿಸುವ ನೀರಿನಲ್ಲಿ ಮುಚ್ಚಳ ಮುಚ್ಚದೇ ಇದ್ದರೆ ಅಂತಹ ನೀರಿನಲ್ಲಿ ಮೊಟ್ಟೆಗಳನ್ನು ಇಟ್ಟು ಈಡೀಸ್ ಸೊಳ್ಳೆ ತನ್ನ ಸಂತತಿಯನ್ನು ವೃದ್ಧಿ ಮಾಡಿಕೊಳ್ಳುತ್ತದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಲೂ ಸ್ವಚ್ಚತೆ ಕಾಪಾಡಬೇಕು. ಸೊಳ್ಳೆ ಮರಿ ಉಂಟಾಗದAತೆ ತಡೆಯಬೇಕು ಎಂದರು. ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ ಅವರು ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರವು ಡೆಂಗ್ಯೂ ಜ್ವರವನ್ನು ಸಾಂಕ್ರಾಮಿಕ ಕಾಯ್ದೆಗೆ ಒಳಪಡಿಸಿದ್ದು, ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಲಕ್ಷö್ಯ ವಹಿಸಿದರೆ 200 ರೂ. ಗಳಿಂದ 2000 ರೂ.ಗಳವರೆಗೆ ದಂಡ ವಿಧಿಸುವ ಕಾನೂನು ಅನುಷ್ಟಾನ ಮಾಡಿದೆ ಎಂದು ತಿಳಿಸಿದರು. ಟೆಮಿಪಾಸ್ ದ್ರಾವಣ: ಕುಡಿಯದ ಮತ್ತು ಕೇವಲ ಮನೆ ಬಳಕೆಗಾಗಿ ಬಳಸುವ ನೀರನ್ನು ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ ಮುಂತಾದವುಗಳಲ್ಲಿ ಸಂಗ್ರಹಿಸಿದಾಗ ಅವುಗಳಿಗೆ ಸರಿಯಾದ ಮುಚ್ಚಳ ಮುಚ್ಚದಿದ್ದಾಗ ಅಧಿಕ ಪ್ರಮಾಣದಲ್ಲಿ ನೀರು ಇದ್ದರೆ ಅಂತಹ ನೀರಿನಲ್ಲಿ ಆರೋಗ್ಯಕ್ಕೆ ಹಾನಿಕಾರವಲ್ಲದ ಕೇವಲ ಸೊಳ್ಳೆ ಮರಿಗಳನ್ನು ನಾಶ ಮಾಡುವ ಟೆಮಿಫಾಸ್ ದ್ರಾವಣವನ್ನು ತಮ್ಮ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಭೇಟಿ ನೀಡಿದಾಗ ಹಾಕಿಸುವುದರಿಂದ ಸೊಳ್ಳೆ ಉತ್ಪತ್ತಿ ತಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಸಿಬ್ಬಂದಿಯವರಾದ ಮಹಾಲಿಂಗ, ಶಾರದ, ಸುನಿತ ಬಾಯಿ, ಮುಮ್ತಾಜ್ ಬೇಗಮ್, ಎಲ್‌ಡಿಸಿ ಪಾವರ್ತಿ ಸೇರಿದಂತೆ ಇತರರು ಹಾಜರಿದ್ದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ