ಗುರುವಾರ, ಅಕ್ಟೋಬರ್ 3, 2024

ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ

ಬಳ್ಳಾರಿ,ಅ.03(ಕರ್ನಾಟಕ ವಾರ್ತೆ): ಕುಡತಿನಿ ಪಟ್ಣಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆ (ಓಎಸ್‌ಎಸ್ ಸರ್ವೇ) ಕಾರ್ಯ ಪೂರ್ಣಗೊಳಿಸಿದ್ದು, ವಿವರಗಳಿಗೆ ಸಂಬAಧಿಸಿದAತೆ ಯಾರಿಂದಲಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಕುಡತಿನಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ. ಕುಡತಿನಿ ಪಟ್ಣಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮನೆ-ಮನೆ ಹಾಗೂ ಇತರೇ ಪ್ರದೇಶಗಳಲ್ಲಿ ಸಮೀಕ್ಷೆ (ಓಎಸ್‌ಎಸ್ ಸರ್ವೇ) ಕಾರ್ಯ ಕೈಗೊಂಡು ಪೂರ್ಣಗೊಳಿಸಲಾಗಿದೆ. ಸಮೀಕ್ಷೆಯಲ್ಲಿ ಶಾಲೆ ಬಿಟ್ಟ ಮಕ್ಕಳ ಕ್ರೂಢೀಕೃತ ಮಾಹಿತಿ/ವಿವರಗಳನ್ನು ಸೆಂಟರ್ ಫಾರ್ ಇ-ಗವರ್ನೆನ್ಸ್ ಇಲಾಖೆಯ ವೆಬ್‌ಸೈಟ್ ಹಾಗೂ ಕಚೇರಿ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದ್ದು, ಸಮೀಕ್ಷೆಯಲ್ಲಿ ಬಿಟ್ಟು ಹೋದ ವಿವರಗಳಿದ್ದಲ್ಲಿ ಅಥವಾ ಸಮೀಕ್ಷೆಯ ವಿವರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆಗೊಂಡ ದಿನದಿಂದ 15 ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿವರಗಳೊಂದಿಗೆ ಲಿಖಿತವಾಗಿ ಸಲ್ಲಿಸಬಹುದು. ನಿಗಧಿತ ದಿನಾಂಕದ ನಂತರ ಬಂದAತಹ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ