ಗುರುವಾರ, ಅಕ್ಟೋಬರ್ 3, 2024
ಬಳ್ಳಾರಿ ನಗರದ ವಿವಿಧ ಪ್ರದೇಶಗಳ ವೃತ್ತ/ರಸ್ತೆಗಳಿಗೆ ಹೆಸರು ನಾಮಕರಣ, ಪುತ್ಥಳಿ ಸ್ಥಾಪನೆ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
ಬಳ್ಳಾರಿ,ಅ.03(ಕರ್ನಾಟಕ ವಾರ್ತೆ):
ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯ ಬಳ್ಳಾರಿ ನಗರದ ವಿವಿಧ ಪ್ರದೇಶಗಳಲ್ಲಿರುವ ವೃತ, ರಸ್ತೆಗಳಿಗೆ ಹೆಸರು ನಾಮಕರಣ ಮತ್ತು ಪುತ್ಥಳಿ ಸ್ಥಾಪನೆ ಮಾಡಲು ಪಾಲಿಕೆಯ ಸಾಮಾನ್ಯ ಸಭೆಯ ತೀರ್ಮಾನಿಸಲಾಗಿದ್ದು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳಿದ್ದಲ್ಲಿ ಪಾಲಿಕೆಯ ಕಚೇರಿಗೆ ಪ್ರಕಟಣೆಗೊಂಡ ದಿನದಿಂದ 30 ದಿನಗಳೊಳಗಾಗಿ ಲಿಖಿತವಾಗಿ ಸಲ್ಲಿಸಬಹುದು.
ನಗರದ ಗಾಂಧಿನಗರ ಬಾಲಭಾರತಿ ರಸ್ತೆಗೆ “ದಿ.ಹೇಮಾದ್ರಿಭಟ್” ರಸ್ತೆ ಎಂದು ನಾಮಕರಣ. ಇನ್‌ಫ್ಯಾಂಟರಿ ರಸ್ತೆ ವಾಸವಿ ಶಾಲೆ ಹತ್ತಿರವಿರುವ (ಮೋರಿ ಹತ್ತಿರ) ವೃತ್ತಕ್ಕೆ “ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ ವೃತ್ತ” ಎಂದು ನಾಮಕರಣ ಮತ್ತು “ಶ್ರೀ ಶ್ರೀ ಶ್ರೀ ಸಿದ್ದರಾಮೇಶ್ವರ ಪುತ್ಥಳಿ” ಸ್ಥಾಪನೆ.
ನಗರದ ಕಾಳಮ್ಮ ಬೀದಿಯ ಪ್ರಾರಂಭದಲ್ಲಿ ಬರುವ ಪಶು ಸಂಗೋಪನಾ ಇಲಾಖೆ ಕಚೇರಿಯ ಬಲಭಾಗದಲ್ಲಿರುವ ಪಾರ್ಕ್ ವೃತ್ತಕ್ಕೆ “ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಾಚಾರಿ ವೃತ್ತ” ಎಂದು ನಾಮಕರಣ.
ಮೋಕಾ ರಸ್ತೆಯ ಕೆಇಬಿ ವೃತ್ತವನ್ನು “ವಿಶ್ವಗುರು ಬಸವೇಶ್ವರ ವೃತ್ತ” ಎಂದು ನಾಮಕರಣ ಮತ್ತು “ಅಶ್ವರೂಢ ಬಸವೇಶ್ವರ ಪುತ್ಥಳಿ” ಸ್ಥಾಪನೆ. ಅಲ್ಲಂ ಭವನ ಹತ್ತಿರದ ವೃತ್ತವನ್ನು “ಗಂಗಮ್ಮ ತಾಯಿ ವೃತ್ತ” ಎಂದು ನಾಮಕರಣ ಮತ್ತು “ಗಂಗಮ್ಮ ತಾಯಿ ಪುತ್ಥಳಿ” ಸ್ಥಾಪನೆ ಮಾಡುವ ಕುರಿತು ನಗರವಾಸಿಗಳಿಂದ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು.
ನಿಗಧಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕರಿಸದೇ ಇದ್ದಲ್ಲಿ ಸರ್ಕಾರದ ಸುತ್ತೋಲೆಯ ಪ್ರಕಾರ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ