ಶುಕ್ರವಾರ, ಅಕ್ಟೋಬರ್ 4, 2024
ಅಡುಗೆ ಸಹಾಯಕ ಸಿಬ್ಬಂದಿ ಹುದ್ದೆಗೆ ಅರ್ಜಿ ಆಹ್ವಾನ
ಬಳ್ಳಾರಿ,ಅ.04(ಕರ್ನಾಟಕ ವಾರ್ತೆ):
ನಗರದ ಈದ್ಗಾ ರಸ್ತೆಯ ಹಿರಾಳ್‌ಕುಡಂನ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಖಾಲಿ ಇರುವ ಅಡುಗೆ ತಯಾರಕ ಸಹಾಯಕ ಸಿಬ್ಬಂದಿ (1) ಹುದ್ದೆಗೆ ಪರಿಶಿಷ್ಟ ಜಾತಿ(ಎಸ್‌ಸಿ) ವರ್ಗದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಅ.15 ರ ಸಂಜೆ 4.30ರೊಳಗಾಗಿ ಶಾಲೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
*ಬೇಕಾದ ದಾಖಲೆ:*
ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್‌ಬುಕ್ ಹಾಗೂ ಇತರೆ ದಾಖಲೆಗಳೊಂದಿಗೆ ಜೆರಾಕ್ಸ್ ಪ್ರತಿಗಳೊಂದಿಗೆ ರಿಜಿಸ್ಟçರ್ ಪೋಸ್ಟ್ ಮೂಲಕ ಶಾಲೆಗೆ ಬಂದು ಅರ್ಜಿ ಸಲ್ಲಿಸಬೇಕು.
*ಷರತ್ತುಗಳು:*
ಅಭ್ಯರ್ಥಿ ವಯೋಮಿತಿ 30 ರಿಂದ 50 ವರ್ಷ ಇರಬೇಕು. ಶಾಲೆ ಇರುವ ಸ್ಥಳದ ಖಾಯಂ ನಿವಾಸಿಯಾಗಿದ್ದು, ಕನಿಷ್ಟ ಏಳನೇ ತರಗತಿ ಉತ್ತೀರ್ಣಗೊಂಡಿರಬೇಕು. ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು. ಮಾಸಿಕ ಗೌರವ ಸಂಭಾವನೆ 3,600 ವೇತನವಿದ್ದು, ಖಾಯಂ ಹುದ್ದೆಯಾಗಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಗರದ ಈದ್ಗಾ ರಸ್ತೆಯ ಹಿರಾಳ್‌ಕುಡಂ ನ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ಕಚೇರಿಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ