ಬುಧವಾರ, ಫೆಬ್ರವರಿ 5, 2025
ಸಿರುಗುಪ್ಪ: ಫೆ.20 ರಂದು ಅಕ್ಕಿ ಬಹಿರಂಗ ಹರಾಜು
ಬಳ್ಳಾರಿ,ಫೆ.05(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಜಂಟಿ ತಂಡವು ಒಟ್ಟು 26 ವಿವಿಧ ಪ್ರಕರಣಗಳಲ್ಲಿ ಅಕ್ರಮ ಪಡಿತರ ದಾಸ್ತಾನು ಹಾಗೂ ಅಕ್ರಮ ಪಡಿತರ ಧಾನ್ಯ ಸಾಗಾಣಿಕೆ/ದಾಸ್ತಾನನ್ನು ಜಪ್ತು ಮಾಡಿದ ಒಟ್ಟು 701.95 ಕ್ವಿಂಟಾಲ್ ಅಕ್ಕಿಯನ್ನು ಸಿರುಗುಪ್ಪ ಪಟ್ಟಣದ ಎಪಿಎಂಸಿ ಆವರಣದ ಕೆಎಫ್‌ಸಿಎಸ್‌ಸಿ ಸಗಟು ಗೋದಾಮಿನಲ್ಲಿ ಫೆ.20 ರಂದು ವಿವಿಧ ಷರತ್ತಿಗೊಳಪಟ್ಟು ಬಹಿರಂಗ ಹರಾಜು ಮಾಡಲಾಗುವುದು ಎಂದು ಸಿರುಗುಪ್ಪ ತಹಶೀಲ್ದಾರರು ತಿಳಿಸಿದ್ದಾರೆ.
ಭದ್ರತಾ ಠೇವಣಿ ನೀಡಿ ನೋಂದಾಯಿಸಿಕೊAಡವರಿಗೆ ಮಾತ್ರ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಆಸಕ್ತಿಯುಳ್ಳ ಬಿಡ್‌ದಾರರು ರೂ.1,50,000/-ಗಳನ್ನು ತಹಶೀಲ್ದಾರರು, ಸಿರುಗುಪ್ಪ ಇವರ ಹೆಸರಲ್ಲಿ ಮುಂಗಡ ಭದ್ರತಾ ಠೇವಣಿ ತೆಗೆದುಕೊಂಡು ಸಿರುಗುಪ್ಪ ಆಹಾರ ನಿರೀಕ್ಷಕರಾದ ಮಹಾರುದ್ರ ಗೌಡ (ಮೊ.9986415163) ಹಾಗೂ ವಿಜಯ ಕುಮಾರ್(ಮೊ.9449738127) ಇವರ ಬಳಿ ನೋಂದಾಯಿಸಿಕೊAದು ಸ್ವೀಕೃತಿ ಪಡೆದುಕೊಳ್ಳಬೇಕು.
ಫೆ.17 ಸಂಜೆ 05.03 ರೊಳಗೆ ನೋಂದಾಯಿಸಿಕೊಳ್ಳಲು ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ತಾಲೂಕು ಕಚೇರಿ (ಆಹಾರ ಶಾಖೆ)ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ