ಬುಧವಾರ, ಫೆಬ್ರವರಿ 5, 2025

ಕಂಪ್ಲಿ ಪುರಸಭೆ: ಸ್ವ-ಸಹಾಯ ಸಂಘಗಳಿAದ ಅರ್ಜಿ ಆಹ್ವಾನ

ಬಳ್ಳಾರಿ,ಫೆ.05.(ಕರ್ನಾಟಕ ವಾರ್ತೆ): ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿಗಾಗಿ ಡೇ-ನಲ್ಮ್ ಅಭಿಯಾನದಡಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಚಿತವಾದ ಅರ್ಹ ಮಹಿಳಾ ಸ್ವಸಹಾಯ ಸಂಘಗಳಿAದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ ಅವರು ತಿಳಿಸಿದ್ದಾರೆ. ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬಹು ದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಾತಿ ಸಂಗ್ರಹಣೆ ಮಾಡಲು ತೊಡಗಿಸಿಕೊಳ್ಳಲಾಗುವುದು. ಆಸಕ್ತ ಮಹಿಳಾ ಸ್ವಸಹಾಯ ಸಂಘಗಳು ಕಂಪ್ಲಿ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದುಕೊಂಡು, ಫೆ.07 ರೊಳಗಾಗಿ ಮುಚ್ಚಿದ ಲಕೋಟೆಯಲ್ಲಿ ಪ್ರಸ್ತಾವನೆ ಸಲ್ಲಿಸಬೇಕು. *ಅರ್ಹತೆ:* ಸ್ವಸಹಾಯ ಸಂಘವು ಡೇ-ನಲ್ಡ್ ಅಭಿಯಾನದಡಿ ನೋಂದಾಯಿಸಿರಬೇಕು (ಎಂಐಎಸ್ ಕೋಡ್ ಹೊಂದಿರಬೇಕು) ಹಾಗೂ ಪಂಚಸೂತ್ರಗಳನ್ನು ಅನುಸರಿಸುತ್ತಿರಬೇಕು. ಆಸಕ್ತ ಸ್ವಸಹಾಯ ಸಂಘದ ಸದಸ್ಯರು ಕನಿಷ್ಠ 7ನೇ ತರಗತಿಯವರೆಗೆ ಶಿಕ್ಷಣವನ್ನು ಹಾಗೂ ಎಲೆಕ್ಟಾçನಿಕ್ ಪರಿಕರಗಳನ್ನು ಬಳಸುವ ಸಾಮರ್ಥ್ಯ ಹೊಂದಿರಬೇಕು. ಸ್ವಸಹಾಯ ಸಂಘದ ಹೆಸರಿನಲ್ಲಿ ಸಕ್ರಿಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಠ 3 ವರ್ಷ ಪೂರೈಸಿರಬೇಕು. ಬ್ಯಾಂಕಿನ ಮೂಲಕ ಅಥವಾ ಆಂತರಿಕ ಸಾಲ ಪಡೆದು ನಿಯಮಿತವಾಗಿ ಸಾಲ ಮರು ಪಾವತಿ ಮಾಡಿರಬೇಕು. ಹೆಚ್ಚಿನ ಮಾಹಿತಿಗಾಗಿ ಕಂಪ್ಲಿ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ