ಸೋಮವಾರ, ಫೆಬ್ರವರಿ 3, 2025

ಸಹಕಾರ ಸಂಘಗಳ ಇಲಾಖೆ: ನಿಯಮ ಉಲ್ಲಂಘಿಸಿದಲ್ಲಿ ದೂರು ನೀಡಿ

ಬಳ್ಳಾರಿ,ಫೆ.03(ಕರ್ನಾಟಕ ವಾರ್ತೆ): ಕರ್ನಾಟಕ ಲೇವಾದೇವಿದಾರರ ಅಧಿನಿಯಮ 1961 ಕಲಂ 28(1) ರನ್ವಯ ಹಾಗೂ ಸರ್ಕಾರದ ಅಧಿಸೂಚನೆಯಂತೆ ಭದ್ರತೆ ಸಾಲಗಳಿಗೆ ಗರಿಷ್ಠ ವಾರ್ಷಿಕ ಬಡ್ಡಿ ಶೇ.14 ಹಾಗೂ ಭದ್ರತೆ ಇಲ್ಲದೇ ಇರುವ ಸಾಲಗಳಿಗೆ ಗರಿಷ್ಠ ವಾರ್ಷಿಕ ಬಡ್ಡಿ ಶೇ.16 ರಷ್ಟು ಮಾತ್ರ ವಿಧಿಸಲು ಅವಕಾಶವಿದೆ. ನಿಯಮ ಉಲ್ಲಂಘಿಸಿದಲ್ಲಿ ಸಂಬAಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ. ಕಲಬುರಗಿಯ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ದೂ.08472-221753, ಬಳ್ಳಾರಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ದೂ.08392-272635 ಹಾಗೂ ಬಳ್ಳಾರಿ ಉಪವಿಭಾಗದ ಸಹಕಾರ ಸಂಘಗಳ ಸಹಾಯ ನಿಬಂಧಕರ ದೂ.08392-272002 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ