ಮಂಗಳವಾರ, ಫೆಬ್ರವರಿ 4, 2025
ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಫೆ.04(ಕರ್ನಾಟಕ ವಾರ್ತೆ):
ನಗರದ ಲಾಲ್‌ಕಮಾನ್‌ನ ಕಟ್ಟೆ ಹತ್ತಿರ ನಿವಾಸಿ ಅಶೋಕ ಎನ್ನುವ 28 ವರ್ಷದ ವ್ಯಕ್ತಿಯು ಜ.27 ರಂದು ಕಾಣೆಯಾಗಿರುವ ಕುರಿತು ಬ್ರೂಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಎಂದು ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ:
ಎತ್ತರ 5.6 ಅಡಿ, ದುಂಡು ಮುಖ, ಗೋದಿ ಮೈಬಣ್ಣ, ದುಂಡನೆಯ ಮೈಕಟ್ಟು, ಕಪ್ಪು ತಲೆಕೂದಲು, ಎಡಗೈ ಮೇಲೆ ಅಮ್ಮ ಎಂದು ಹಾಗೂ ಬಲ ಭುಜದ ಹತ್ತಿರ ಸೂರ್ಯನ ಗುರುತು ಹಚ್ಚೆಯನ್ನು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೀಲಿ ಬಣ್ಣದ ಚೆಕ್ಸ್ ಅಂಗಿ ಮತ್ತು ತಿಳಿ ಬಾದಾಮಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಕನ್ನಡ, ತೆಲುಗು, ಹಿಂದಿ ಭಾಷೆ ಮಾತಾನಾಡುತ್ತಾನೆ.
ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬ್ರೂಸ್‌ಪೇಟೆ ಪೋಲಿಸ್ ಠಾಣೆಯ ದೂ.08392-272022, ಪಿಎಸ್‌ಐ ಮೊ.9480803081, ಪಿಐ ಮೊ.9480803045 ಅಥವಾ ಬಳ್ಳಾರಿ ಪೋಲಿಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ