ಶನಿವಾರ, ಜೂನ್ 3, 2023

ವಿದೇಶದಲ್ಲಿ ಉದ್ಯೋಗವಕಾಶ: ಟ್ರಕ್ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ ಬಳ್ಳಾರಿ,ಜೂ.03(ಕರ್ನಾಟಕ ವಾರ್ತೆ): ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಯುರೋಪ್ ದೇಶದ ಪೋಲ್ಯಾಂಡ್ ಮತ್ತು ಹಂಗೇರಿಯಲ್ಲಿ ಟ್ರಕ್ ಚಾಲಕರ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಸ್.ಬಸವರಾಜಪ್ಪ ಅವರು ತಿಳಿಸಿದ್ದಾರೆ. *ಅರ್ಹತೆ:* 2009 ಸೆಪ್ಟಂಬರ್ 9 ಕ್ಕಿಂತ ಮೊದಲು ಕೊಡಲಾದ ಭಾರೀ ಟ್ರಕ್ ಚಾಲನಾ ಪರವಾನಿಗೆಯನ್ನು ಹೊಂದಿರಬೇಕು. ವಿದೇಶಿ ಉದ್ಯೋಗದಾತರಿಂದ ಜೂನ್ 20 ಮತ್ತು 21 ರಂದು ನೇರ ಸಂದರ್ಶನ ನಡೆಯಲಿದೆ. ವೇತನ (ಪ್ರತಿ ತಿಂಗಳಿಗೆ) 1.07 ಲಕ್ಷದಿಂದ 1.34 ಲಕ್ಷದವರೆಗೆ ಇರುತ್ತದೆ. ಇಂಗ್ಲೀಷ್ ಭಾಷೆ ಕಡ್ಡಾಯವಾಗಿರುತ್ತದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶವಿದ್ದು, ವಸತಿ, ವಿಮೆ ಸೌಲಭ್ಯ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂ.11 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ಅನಂತಪುರ ರಸ್ತೆಯ ಹೊಸ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8073852104, 9964502514 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ