ಗುರುವಾರ, ಜೂನ್ 15, 2023

ಅನಾಮಧೇಯ ಮೃತ ವ್ಯಕ್ತಿಯ ಶವ; ವಾರಸುದಾರರ ಪತ್ತೆಗಾಗಿ ಮನವಿ ಬಳ್ಳಾರಿ,ಜೂ.15(ಕರ್ನಾಟಕ ವಾರ್ತೆ): ನಗರದ ಕಣೆಕಲ್ ಬಸ್‍ನಿಲ್ದಾಣದ ಬಳಿಯ ರಸ-ಗೊಬ್ಬರ ಅಂಗಡಿಯ ಮುಂಭಾಗ ಸುಮಾರು 60 ರಿಂದ 65 ವರ್ಷದ ಅನಾಮಧೇಯ ವ್ಯಕ್ತಿಯು ಜೂ.14 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ ಅಂದಾಜು 5.5 ಅಡಿ, ತೆಳುವಾದ ಮೈಕಟ್ಟು, ದುಂಡು ಮುಖ, ಕಪ್ಪು ಮೈಬಣ್ಣ, ತಲೆಯಲ್ಲಿ ಬಿಳಿ ಕೂದಲು ಹೊಂದಿರುತ್ತಾನೆ. ನೀಲಿ ಬಣ್ಣದ ಅಂಗಿ ಮತ್ತು ಖಾಕಿ ಅಂಗಿ ತೊಟ್ಟಿರುತ್ತಾನೆ. ಅನಾಮಧೇಯ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬ್ರೂಸ್ ಪೇಟೆ ಪೆÇಲೀಸ್ ಠಾಣೆಯ ದೂ.08392-272022, ಪಿ.ಐ ಮೊ.9480803045 ಹಾಗೂ ಬಳ್ಳಾರಿ ಡಿ.ಎಸ್.ಪಿ ಮೊ.9480803020 ಗೆ ಸಂಪರ್ಕಿಸಬಹುದಾಗಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ