ಸೋಮವಾರ, ಜೂನ್ 19, 2023
ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಜೂ.21 ರಂದು
ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ):
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆವಿ ಬಿಸಲಹಳ್ಳಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಜೂ.21ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 02 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-52 ಶಂಕರಬಂಡೆ ಐಪಿ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್ ಕಮ್ಮರಚೇಡು ಗ್ರಾಮಗಳು.
ಎಫ್-53 ಶಂಕರಬಂಡೆ ಎನ್.ಜೆ.ವೈ ಫೀಡರ್ ಮಾರ್ಗದ ತಿರುಮಲನಗರ, ಶಂಕರಬಂಡೆ, ಬೂಬ್ಬುಕುಂಟೆ, ಇಬ್ರಾಹಿಂಪುರ, ಎತ್ತಿನಬೂದಿಹಾಳ್, ಬೆಂಚಿಕೊಟ್ಟಾಲ್ ಮಿಂಚೇರಿ, ಬುರ್ರನಾಯಕನಹಳ್ಳಿ ಗ್ರಾಮಗಳು.
ಎಫ್-54 ಬಿಸಲಹಳ್ಳಿ ಫೀಡರ್ ಮಾರ್ಗದ ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ ಗ್ರಾಮಗಳು.
ಎಫ್-55 ಅಸುಂಡಿ ಐಪಿ ಫೀಡರ್ ಮಾರ್ಗದ ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ ಗ್ರಾಮಗಳು.
ಎಫ್-56 ಕಮ್ಮರಚೇಡು ಎನ್.ಜೆ.ವೈ ಫೀಡರ್ ಮಾರ್ಗದ ತಲಮಾಮಿಡಿ, ಕಮ್ಮರಚೇಡು, ಬಿಸಲಹಳ್ಳಿ, ಜನತಾನಗರ, ತಗ್ಗಿನಬೂದಿಹಾಳ್, ಅಮರಾಪುರ, ಬೇವಿನಹಳ್ಳಿ, ಅಸುಂಡಿ, ಕಕ್ಕಬೇವಿನಹಳ್ಳಿ ಗ್ರಾಮಗಳು.
ಎಫ್-95 ಫೀಡರ್‍ನ ರೂಪನಗುಡಿ ಐಪಿ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಗ್ರಾಮಗಳು.
ಎಫ್-96 ಫೀಡರ್‍ನ ರೂಪನಗುಡಿ ಎನ್‍ಜೆವೈ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ